
ಬ್ರೀಟನ್, ನ. 6- ಇಂಗ್ಲೆಂಡ್ನ ಸಫೆÇಲ್ಕ್ ಜಿಲ್ಲೆಯ ಫೆÇೀರ್ಡ್ಹ್ಯಾಮ್ ಮೂಲದ ಬ್ರೆಂಡಾ ವಿಲ್ಲಿ ಸನ್ ಅತಿ ಜೋರಾಗಿ ಕಿರುಚುವ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ ತಮ್ಮ ಉನ್ನತ ಶ್ರೇಣಿಯ ಧ್ವನಿಯ ಸಾಮಥ್ರ್ಯದಿಂದ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅವರು ಕಿರುಚುವ ಧ್ವನಿಯ ತೀವ್ರತೆಯು 105.9 ಡೆಸಿಬಲ್ ತಲುಪಿದ್ದು, ಮಹಿಳೆಯರ ವಿಭಾಗದಲ್ಲಿ ಇದು ಪ್ರಪಂಚದಲ್ಲೇ ಅತ್ಯಂತ ಜೋರಾದ ಧ್ವನಿಯ ಕೂಗು ಎಂದು ದಾಖಲಾಗಿದೆ. ವೃತ್ತಿಯಲ್ಲಿ ಟೌನ್ ಕ್ರೈಯರ್ ಆಗಿರುವ ಬ್ರೆಂಡಾ ಅವರಿಗೆ ಸಾರ್ವಜನಿಕವಾಗಿ ಗಟ್ಟಿಯಾಗಿ ಕೂಗಿ ಸುದ್ದಿ ತಿಳಿಸುವ ಅಭ್ಯಾಸವಿದ್ದು, ಈ ಬಾರಿಯ ಪರಿಶೀಲನೆಯಲ್ಲಿ 100 ಡೆಸಿಬಲ್ ಗಡಿ ದಾಟಿ 105.9 ಡೆಸಿಬಲ್ ತಲುಪಿ ಈ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಇಂಗ್ಲೆಂಡ್ನ ಸಫೆÇಲ್ಕ್ ಜಿಲ್ಲೆಯ ನ್ಯೂಮಾರ್ಕೆಟ್ ನಗರದಲ್ಲಿ ಟೌನ್ ಕ್ರೈಯರ್ (ಸಾರ್ವಜನಿಕವಾಗಿ ದೊಡ್ಡ ಧ್ವನಿಯಲ್ಲಿ ಪ್ರಕಟಣೆ ಕೂಗುವ ಅಧಿಕಾರಿ) ಆಗಿ ಕಳೆದ 37ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬ್ರೆಂಡಾ ವಿಲ್ಲಿ ಸನ್ ಅವರು ಮಹಿಳಾ ವಿಭಾಗದಲ್ಲಿ ವಿಶ್ವದ ಅತಿ ದೊಡ್ಡ ಧ್ವನಿಯ ಕೂಗು ವಿಭಾಗದಲ್ಲಿ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.





















