
ಕಲಬುರಗಿ,ನ.13-ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಮಾಡಿ ಸಾರ್ವಜನಿಕರಿಗೆ ಪುಸ್ತಕ ಓದಿನ ಪ್ರೀತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಶ್ಲಾಘಿಸಿದರು.
ಕನ್ನಡ ಪುಸ್ತಕ ಪದಾಧಿಕಾರ ಹಾಗೂ ಜಿಲ್ಲಾ ಜಾಗೃತ್ ಸಮಿತಿ ನಗರದ ಹೈಕೋರ್ಟ್ ಎದುರುಗಡೆ ಬಡಾವಣೆಯ ಪುಸ್ತಕ ಪ್ರೇಮಿ ಹಾಗೂ ಶಾಸಕÀ ಎಂ.ವೈ. ಪಾಟೀಲ್ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಒಳ್ಳೆಯ ಯೋಜನೆಯನ್ನು ಹಾಕಿಕೊಂಡು ಪ್ರತಿಯೊಬ್ಬರ ಮನೆಯಲ್ಲಿ ಗ್ರಂಥಾಲಯ ಇರುವ ಹಾಗೆ ಮಾಡುತ್ತಿರುವುದು ಶ್ಲಾಘನೀಯ ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ಕಡೆ ವಾಲಿರುವುದನ್ನು ಕಂಡು ಅವರನ್ನು ಪುಸ್ತಕ ಓದುವ ರುಚಿಯನ್ನು ಹೆಚ್ಚಿಸುವ ವಿಶೇಷ ಪ್ರಯತ್ನ ಪ್ರಾಧಿಕಾರದು ಎಂದು ಪಾಟೀಲ್ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್. ನಿರಗುಡಿ ಅವರು ಮಾತನಾಡಿ, ಪುಸ್ತಕ ಪ್ರಾಧಿಕಾರ ವಿಶೇಷ ಕಾರ್ಯಕ್ರಮಗಳ ಹಮ್ಮಿಕೊಳ್ಳೊಳ್ಳುವುದರ ಜೊತೆಗೆ ಈ ಭಾಗದ ಸಾಹಿತಿಗಳ ಸಂಪುಟಗಳನ್ನು ಹೊರ ತರುವುದು ಶಾಲಾ-ಕಾಲೇಜುಗಳಲ್ಲಿ ನನ್ನ ನೆಚ್ಚಿನ ಪುಸ್ತಕ , ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಭಾಗದ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವುದು. ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಮಾಡುವುದರ ಮೂಲಕ ಪುಸ್ತಕ ಓದುವ ಹವ್ಯಾಸ ಬೆಳೆಸುತ್ತದೆ ಎಂದು ನಿರಗುಡಿ ಹೇಳಿದರು.
ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಾಹಿತಿಗಳಾದ ಭೀಮಣ್ಣ ಬೋನಾಳ ಅವರು ಮಾತನಾಡುತ್ತಾ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉಪಯೋವಾಗಲಿ ಪುಸ್ತಕಗಳು ಓದುವುದರಿಂದ ಜ್ಜಾನಮತ್ತು ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ,ಡಾ ಮಹೇಶ್ ಗಂವ್ಹಾರ,ಡಾ ನಾಗಪ್ಪ ಗೋಗಿ,ಡಾ ಪರ್ವೀನ್ ಸುಲ್ತಾನಾ , ಚಾಮರಾಜ ದೊಡ್ಡಮನಿ,ರೇವಣಸಿದ್ದಪ್ಪ ದುಕಾನ,ಅಂಬಾರಾಯ ಕೋಣೆ, ಶಿವಶರಣಪ್ಪ ಉದನೂರ,ಸಂಗಣ್ಣ ಬಿರಾದಾರ್ ಇನ್ನು ಅನೇಕರು ಇದ್ದರು.





















