ಕಲಬುರಗಿ: ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯನ್ನು ಬಂದ್ ಮಾಡಿ, ಅದರ ಹೊಣೆಯನ್ನು ಖಾಸಗಿಯವರಿಗೆ ನೀಡುವ ಪ್ರಸ್ತಾವನೆಯನ್ನು ಖಂಡಿಸಿ ಇಂದು ಕರ್ನಾಟಕ ರಾಜ್ಯ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.ಯಶೋಧಾ ರಾಠೋಡ್,ಪ್ರಭುದೇವ ಯಳಸಂಗಿ,ಅಂಬವ್ವ ಶ್ರೀನಿವಾಸ ಸರಡಗಿ,ಶಿವಲಿಂಗಮ್ಮ ಲೆಂಗಟಿಕರ್,ಸರೋಜಿನಿ ಹೀರಾಪುರ ಸೇರಿದಂತೆ ಹಲವರು ಪಾಲ್ಗೊಂಡರು.