Home ಜಿಲ್ಲೆ ಕಲಬುರಗಿ ಸಚಿವ ಪ್ರಿಯಾಂಕ್ ಖರ್ಗೆ ಶಿಕ್ಷಣ ಪ್ರೇಮಿ:ಹೊಸ್ಮನಿ

ಸಚಿವ ಪ್ರಿಯಾಂಕ್ ಖರ್ಗೆ ಶಿಕ್ಷಣ ಪ್ರೇಮಿ:ಹೊಸ್ಮನಿ

ಚಿತ್ತಾಪುರ:ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜನಪರ ನಾಯಕರಾಗಿರುವುದರ ಜೊತೆಗೆ ಅಭಿವೃದ್ಧಿ ಹರಿಕಾರ, ಶಿಕ್ಷಣ ಪ್ರೇಮಿಗಳಾಗಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಹೇಳಿದರು.

ತಾಲೂಕಿನ ಇಂಗನಕಲ್ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ 48ನೇ ಜನ್ಮದಿನದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪೆನ್ನು, ನೋಟ ಬುಕ್, ಕಂಪಾಸ ಮತ್ತು ಪುಸ್ತಕ ವಿತರಿಸಿ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರು ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡುತ್ತಿದ್ದಾರೆ ಎಂದರು.

ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ಬೃಹತ ಶಿಕ್ಷಣ ಹಬ್ಬ ನಿರ್ಮಿಸಿದ್ದಾರೆ. ಬಡವರ ಪರ ಹಾಗೂ ಅಭಿವೃದ್ಧಿ ಪರವಾಗಿದ್ದಾರೆ. ಇಂತಹ ಸಚಿವರನ್ನು ಈ ಕ್ಷೇತ್ರದ ಮತದಾರರು ಹ್ಯಾಟ್ರಿಕ್ ಗೆಲುವು ಸಾಧಿಸಲು ಅನುಕೂಲ ಮಾಡಿ ಕೊಟ್ಟಿದ್ದರಿಂದ, ಕ್ಷೇತ್ರದ ಸವಾರ್ಂಗಿಣ ಅಭಿವೃದ್ಧಿಗೆ ಕೈ ಹಿಡಿದಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಕ್ರಮ ಚಟುವಟಿಕೆಗಳಿಗೆ ಖರ್ಗೆರವರು ಸಿಂಹಸ್ವಪ್ನವಾಗಿದ್ದಾರೆ. ಹುಟ್ಟುಹಬ್ಬ ಆಡಂಬರ ಬೇಡ. ಬಡವರಿಗೆ ಇತರರಿಗೆ ಪ್ರೇರಣೆಯಾಗಲಿ ಎಂಬ ದೃಷ್ಟಿಯಿಂದ ಬಡವರ ಬದುಕಿಗೆ ಅನುಕೂಲವಾಗಲಿ ಎಂಬ ಬಯಕೆಯಾಗಿದೆ. ಕೆಲವರು ರಾಜಕಾರಣದಲ್ಲಿ ಬಂದು ಗೆಲುವು ಸಾಧಿಸಿದ ಕೂಡಲೇ ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಕನ್ನುವ ಸ್ವಾರ್ಥ ರಾಜಕಾರಣ ಮಾಡುತ್ತಾರೆ. ಆದರೆ ಪ್ರಿಯಾಂಕ್ ಖರ್ಗೆ ಮಾತ್ರ ಯಾವುದೇ ಸ್ವಾರ್ಥ ರಾಜಕಾರಣ ಮಾಡದೇ ಎಲ್ಲ ಜನಾಂಗದವರು ನಮ್ಮವರು, ಅವರ ಏಳಿಗೆಯೇ ನನ್ನ ಏಳಿಗೆ ಎಂದು ತಿಳಿದು ಹಿಂದುಳಿದ ಕ್ಷೇತ್ರ ಎನಿಸಿಕೊಂಡಿರುವ ಚಿತ್ತಾಪುರವನ್ನು ಅಭಿವೃದ್ಧಿ ಪಡಿಸಿ, ಶಿಕ್ಷಣಕ್ಕೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಶೈಕ್ಷಣಿಕ ಕ್ರಾಂತಿಯನ್ನೇ ಸೃಷ್ಠಿಸುತ್ತಿದ್ದಾರೆ ಎಂದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪೆನ್ನು, ಪುಸ್ತಕ, ಕಂಪಾಸ, ಪರೀಕ್ಷೆಯ ಪ್ಯಾಡ್, ಕಲೆಯ ಪುಸ್ತಕ, ನೋಟ ಬುಕ್, ಕನ್ನಡ, ಹಿಂದಿ, ಇಂಗ್ಲಿಷ್ ಅಂಕಲಿಪಿಗಳು, ಅಂಗನವಾಡಿ ಮಕ್ಕಳಿಗೆ ಸ್ಲೇಟ್, ಪೆನ್ಸಿಲ್, ಸಿಹಿ ವಿತರಿಸಲಾಯಿತು.

ಮುಖಂಡರಾದ ಅನಿಲಕುಮಾರ ಹುಣಚಿಕರ್, ನಾಗರಾಜ ಗಾಯಕವಾಡ, ಪ್ರಭುಲಿಂಗ ಮಂಗಲಗಿ ಮಾತನಾಡಿದರು.
ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ದಂಡೆ, ಪ್ರಮುಖರಾದ ಸಿದ್ದಣ್ಣ ಮಗಿ, ನಾಗರಾಜ್ ಬಂಡಿವಡ್ಡರ್, ದೇವಾನಂದ್ ಮಂಗಲಗಿ, ರೇವಣಸಿದ್ಧ ಹಡಪದ್, ರೇವಣಸಿದ್ಧ ಮಂಗಲಗಿ, ಸುನೀಲ ಮಂಗಲಗಿ, ಮಲ್ಲಪ್ಪ ಕಂದಗೋಳ, ಮಹಾದೇವ್ ಮಹಾಗಾಂವಕರ್, ಮನೋಹರ್ ಕಟ್ಟಿಮನಿ, ದೀಪಕ ಹೊಸ್ಮನಿ, ಕಾಶಿನಾಥ ಬೆಳಗುಂಪಾ, ಶರಣಪ್ಪ ಕದ್ದರಗಿ, ಚಂದ್ರಶೇಖರ ಕೊರಬಾ, ಶಿವಯೋಗಿ ಹೊಸಮನಿ, ರಫೀಕ್ ದುಕಾನದಾರ್ ಸೇರಿದಂತೆ ಇತರರಿದ್ದರು.
ಮಲ್ಕಪ್ಪ ತೆಂಗಳಿ ನಿರೂಪಣೆ ಮಾಡಿದರು. ಪರಮೇಶ್ವರ್ ಬೆನಕನಪಳ್ಳಿ ಸ್ವಾಗತಿಸಿದರು. ಹಾಜಿಸಾಬ್ ದುಕಾನದಾರ್, ವಂದಿಸಿದರು.