
ಸೇಡಂ, ನ,23: ನಗರದ ಪ್ರಮುಖ ರಸ್ತೆಗಳ ಸೌಂದರ್ಯವನ್ನು ಹೆಚ್ಚಿಸುವ ಮತ್ತು ರಾತ್ರಿ ವೇಳೆ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ಒದಗಿಸುವ ನಿಟ್ಟಿನಲ್ಲಿ 30 ಕೋಟಿ ಖರ್ಚು ಮಾಡಿ ಆಧುನಿಕ ಮತ್ತು ಅಲಂಕಾರಿಕ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ನಗರದ ಜಿಕೆ ರಸ್ತೆಯ ಹಳೆಯ ಎಚ್ ಡಿ ಎಫ್ ಸಿ ಬ್ಯಾಂಕ್ ಬಳಿ ಆಯೋಜಿಸಲಾಗಿದ್ದ ಬಸವೇಶ್ವರ ವೃತ್ತದಿಂದ ಕೊಡ್ಲಾ ಕ್ರಾಸ್ ವರೆಗೆ ಅಳವಡಿಸಲಾಗಿದ್ದ ಬೀದಿ ದೀಪಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು ಪಟ್ಟಣದೊಳಗಿರುವ ಪೆÇಲೀಸ್ ಠಾಣೆಯಿಂದ ಬಸವೇಶ್ವರ್ ಕ್ರಾಸ್ ವರೆಗೆ, ಬಸವೇಶ್ವರ್ ಕ್ರಾಸ್ ನಿಂದ ಚಿಂಚೋಳಿ ಕ್ರಾಸ್ ಅವರಿಗೆ, ಬಸವೇಶ್ವರ್ ಕ್ರಾಸ್ ನಿಂದ ಕೋಲಾ ಕ್ರಾಸ್ ವರೆಗೆ ಬೀದಿ ದೀಪ ಅಳವಡಿಸಿ ನಮ್ಮ ನಗರವನ್ನು ಜಾಗತಿಕ ಮಟ್ಟದಲ್ಲಿ ಮಾದರಿ ಮತ್ತು ಸುಂದರ ನಗರವನ್ನಾಗಿ ಸೌಂದರ್ಯೀಕರಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಈ ವೇಳೆಯಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ್ ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರೂದ್ನೂರ, ಅಬ್ದುಲ್ ಗಫೂರ, ಎಚ್ಡಿ ಗೌಸ್, ಸಂತೋಷ್ ಕುಲಕರ್ಣಿ, ಗುತ್ತಿಗೆದಾರ ಸಿದ್ದು ಸಜ್ಜನ,ಎಇಇ ಅಕ್ತರ್ ಪಟೇಲ್, ಹಾಜಿ ನಾಡೇಪಲ್ಲಿ, ಅಬ್ದುಲ್ ಸತ್ತರ ನಾಡೇಪಲ್ಲಿ, ಭೀಮಾಶಂಕರ ಕೊಳ್ಳಿ, ಜೆಸ್ಕಾಂ ಇಲಾಖೆಯ ಸುಲೇಮಾನ್,ಸೇರಿದಂತೆ ಇತರರಿದ್ದರು.ಲೋಕಪಯೋಗಿ ಇಲಾಖೆಯ ಎಇಇ ವಿಶ್ವನಾಥ ಮಾವಿನಗಿಡ ಪ್ರಾಸ್ತವಿಕ ಮಾತನಾಡಿದರು. ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ
ಸ್ವಾಗತಿಸಿ, ನಿರೂಪಿಸಿದರು.





















