Home ಸುದ್ದಿ ಅಂತರಾಷ್ಟ್ರೀಯ ಲಂಡನ್ : ಚೂರಿ ಇರಿತಕ್ಕೆ ಭಾರತ ಮೂಲದ ವ್ಯಕ್ತಿ ಬಲಿ

ಲಂಡನ್ : ಚೂರಿ ಇರಿತಕ್ಕೆ ಭಾರತ ಮೂಲದ ವ್ಯಕ್ತಿ ಬಲಿ

ಲಂಡನ್,ಜೂ.೧೪- ಲಂಡನ್‌ನಲ್ಲಿ ನಡೆದ ಚಾಕು ಇರಿತ ದಾಳಿಯಲ್ಲಿ ೨೬ ವರ್ಷದ ಭಾರತೀಯ ಮೂಲದ ವ್ಯಕ್ತಿಯ ಸಾವನ್ನಪ್ಪಿದ್ದು ತನಿಖೆ ಮುಂದುವರೆದಿದೆ, ಘಟನೆ ಸಂಬಂಧ ೭ ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಡಾರ್ಮರ್ಸ್ ವೆಲ್ಸ್ ಲೇನ್ ಜಂಕ್ಷನ್ ಬಳಿಯ ನಾರ್ತ್ ರಸ್ತೆಯಲ್ಲಿ ಇರಿತಕ್ಕೊಳಗಾಗಿದ್ದ ಗುರ್ಭೇಜ್ ಸಿಂಗ್ ಅವರನ್ನು ಬಲಿಪಶು ಎಂದು ಗುರುತಿಸಲಾಗಿದ್ದು ಸಾಕ್ಷಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು ಮಧ್ಯರಾತ್ರಿಯ ನಂತರ ಅಂಗಡಿಯ ಹೊರಗೆ ಗಜೇಂದ್ರ ಸಿಂಗ್ ಮೇಲೆ ದಾಳಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಪಶ್ಚಿಮ ಲಂಡನ್‌ನ ಸೌತಾಲ್‌ನಲ್ಲಿ ನಡೆದ ಚಾಕು ದಾಳಿಯಲ್ಲಿ ೨೬ ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ.


೩೦ ರ ಹರೆಯದ ವ್ಯಕ್ತಿ ಎಂದು ನಂಬಲಾದ ಎರಡನೇ ವ್ಯಕ್ತಿ ಕೂಡ ಸ್ಥಳದಲ್ಲಿ ಗಾಯಗೊಂಡಿರುವುದು ಕಂಡುಬಂದಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಪೊಲೀಸರ ಪ್ರಕಾರ, ಆ ಪ್ರದೇಶದಲ್ಲಿ ಚಾಕು ಇರಿತದ ವರದಿಗಳ ನಂತರ ಲಂಡನ್ ಆಂಬ್ಯುಲೆನ್ಸ್ ಸೇವೆಗೆ ಮಾಹಿತಿ ನೀಡಿ ದಾಳಿಗೆ ಒಳಗಾಗಿದ್ದ ಭಾರತೀಯ ಮೂಲದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ವೈದ್ಯಕೀಯ ಸಿಬ್ಬಂದಿಯ ಪ್ರಯತ್ನಗಳ ಹೊರತಾಗಿಯೂ, ಚಾಕು ಇರಿತದಿಂದ ಗಾಯಗೊಂಡಿದ್ದ ಸಿಂಗ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಲಂಡನ್‌ನಲ್ಲಿ ಚಾಕು ದಾಳಿಯಲ್ಲಿ ೨೬ ವರ್ಷದ ಭಾರತೀಯ ಮೂಲದ ವ್ಯಕ್ತಿ ಸಾವು ತನಿಖೆ ಮುಂದುವರಿದಂತೆ ಸಾಕ್ಷಿಗಳು ಮತ್ತು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ.

೨೦ ರಿಂದ ೩೦ ರ ಹರೆಯದೊಳಗಿನ ಏಳು ಪುರುಷರನ್ನು ಕೊಲೆಯ ಶಂಕೆಯ ಮೇಲೆ ಸ್ಥಳದಲ್ಲೇ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಯ ನಂತರ, ಆರು ಜನರನ್ನು ಯಾವುದೇ ಕ್ರಮವಿಲ್ಲದೆ ಬಿಡುಗಡೆ ಮಾಡಲಾಗಿದೆ, ಆದರೆ ಒಬ್ಬ ವ್ಯಕ್ತಿಗೆ ಜಾಮೀನು ನೀಡಲಾಗಿದೆ.