Home ಜಿಲ್ಲೆ ಬೆಂಗಳೂರು ಚಿಕ್ಕಬಳ್ಳಾಪುರದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಚಿಕ್ಕಬಳ್ಳಾಪುರದಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಚಿಕ್ಕಬಳ್ಳಾಪುರ.ಸೆ.೪- ತಾಲೂಕಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಪುಣ್ಯ ದಿನವನ್ನು ಭಕ್ತಾದಿಗಳು ಶ್ರದ್ಧಾ ಭಕ್ತಿಗಳಿಂದ ಆಚರಿಸಿ ಶ್ರೀ ಕೃಷ್ಣನನ್ನು ಪೂಜಿಸುವ ಮೂಲಕ ಭಕ್ತಿ ಭಾವ ಪ್ರದರ್ಶಿಸಿದರು.


ಪ್ರತಿ ವರ್ಷ ಶ್ರಾವಣ ಮಾಸದ ಅಷ್ಟಮಿ ದಿನದಂದು ಬರುವುದು ಶ್ರೀಕೃಷ್ಣ ಜನ್ಮಾಷ್ಟಮಿ ಮಹಾವಿಷ್ಣುವಿನ ದಶಾವತಾರಗಳಲ್ಲಿ ೮ನೇ ಅವತಾರವಾಗಿ ಧರ್ಮ ಸಂರಕ್ಷಣೆ ಮಾಡುವ ಮಹತ್ ಕಾರ್ಯವನ್ನು ಮಾಡಿ ಅಷ್ಟೇ ಅಲ್ಲದೆ ಅತ್ಯಂತ ಪವಿತ್ರವಾದ ಲೋಕಗಳು ಉಳ್ಳ ಭಗವದ್ಗೀತೆಯನ್ನು ಜಗತ್ತಿಗೆ ನೀಡಿದ ಶ್ರೀ ಕೃಷ್ಣ ಎಲ್ಲರಿಗೂ ಆರಾಧ್ಯ ದೈವ ಆಗಿದ್ದಾರೆ.


ನಗರದ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಕೃಷ್ಣಜನ್ಮಾಷ್ಟಮಿ ಅದ್ದೂರಿಯಿಂದ ಆಚರಿಸಿದ್ದು,ದೇವತಾ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಅಲಂಕಾರ ನಡೆದವು.


ಅಷ್ಟೇ ಅಲ್ಲದೆ ಮನೆ ಮನೆಗಳಲ್ಲಿ ಶ್ರೀ ಕೃಷ್ಣದೇವರ ಚಿತ್ರಪಟವನ್ನು ಚಿಕ್ಕ ಚಿಕ್ಕ ಮೂರ್ತಿಗಳನ್ನು ಇಟ್ಟು ಅವರಿಗೆ ಅಲಂಕಾರಗಳನ್ನು ಮಾಡಿ ವಿಶೇಷ ನೈವೇದ್ಯಗಳನ್ನು ನೀಡುವ ಮೂಲಕ ಭಕ್ತರು ಸಂಭ್ರಮಿಸಿದ್ದು ತಾಲೂಕಿನ ಯಾದವ ಜನಾಂಗದ ಮುಖಂಡರು ಹಾಗೂ ಖ್ಯಾತ ವಕೀಲರು ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆಎಂ ಮುನೇಗೌಡ ಮನೆಯಲ್ಲಿಯೂ ಸಹ ಅದ್ದೂರಿಯಾಗಿ ಶ್ರೀಕೃಷ್ಣ ಜಯಂತಿ ಆಚರಿಸಿದ್ದು ಭತ್ತರುಗಳು ಹೆಚ್ಚು ಮಂದಿ ಕೃಷ್ಣಮೂರ್ತಿಯನ್ನು ಕಂಡು ಸಂಭ್ರಮಿಸಿದರು.