Home ಜಿಲ್ಲೆ ಕಲಬುರಗಿ ದೇ.ಗಾಣಗಾಪೂರ; ಟಂ-ಟಂ ಚಾಲಕನ ಭೀಕರ ಹತ್ಯೆ

ದೇ.ಗಾಣಗಾಪೂರ; ಟಂ-ಟಂ ಚಾಲಕನ ಭೀಕರ ಹತ್ಯೆ

ಕಲಬುರಗಿ,ಜು.24-ಕೇವಲ “ದಿಟ್ಟಿಸಿ ನೋಡಿದ’ ಸಣ್ಣ ವಿಚಾರವೇ ನೆಪವಾಗಿ ಇಟ್ಟುಕೊಂಡು ಟಂ-ಟಂ ಚಾಲಕನಾಗಿದ್ದ 19 ವರ್ಷದ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ದೇವಲಗಾಣಗಾಪುರದಲ್ಲಿ ನಡೆದಿದೆ. ಈ ಘಟನೆ ಗ್ರಾಮದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಶುಕ್ರವಾರ ನಸುಕಿನ ಜಾವ 2:17 ರ ಸುಮಾರಿಗೆ ದೇವಲ ಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಅವಧೂತ ಆಶ್ರಮದ ಸಮೀಪ ಈ ಕ್ರೌರ್ಯ ನಡೆದಿದೆ. ಗ್ರಾಮದ ದತ್ತು (19) ಎಂಬ ಟಂ-ಟಂ ಚಾಲಕ ಹತ್ಯೆಯಾದ
ದುರ್ದೈವಿಯಾಗಿದ್ದಾನೆ. ದತ್ತು ಮೇಲೆ ಅದೇ ಗ್ರಾಮದ ಪ್ರಜ್ವಲ್ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ಹೊಸಮನಿ ಎಂಬಿಬ್ಬರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತು ಅವರನ್ನು ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಆರೋಪಿಗಳು ತಂಗಿದ್ದ ಜಾಗದಲ್ಲಿ ದಿಟ್ಟಿಸಿ ನೋಡಿದೆ’ ಎಂಬ ಕ್ಷುಲ್ಲಕ ನೆಪವನ್ನಿಟ್ಟುಕೊಂಡು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಗಾಯಾಳು ಯುವಕ ಆಸ್ಪತ್ರೆಯಲ್ಲಿದ್ದಾಗ ನೀಡಿರುವ ಹೇಳಿಕೆಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವಲಗಾಣಗಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲೇ ನಡುರಾತ್ರಿ ನಡೆದ ಈ ಭೀಕರ ಘಟನೆಯಿಂದಾಗಿ ಗ್ರಾಮದಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.