
ಕುಣಿಗಲ್, ಆ೧- – ಪಟ್ಟಣದ ಜ್ಞಾನಭಾರತಿ ವಿದ್ಯಾಸಂಸ್ಥೆ ವತಿಯಿಂದ ಹಳೆ ವಿದ್ಯಾರ್ಥಿಗಳು ಹಾಗೂ ಈಗಿನ ವಿದ್ಯಾರ್ಥಿಗಳು ಗುರುಪೂರ್ಣಿಮೆ ಅಂಗವಾಗಿ ಗುರುವಂದನೆ ಕಾರ್ಯಕ್ರಮ ಪ್ರಾಂಶುಪಾಲರಾದ ಗೋವಿಂದೇಗೌಡ ರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದೇಗೌಡ, ವಿದ್ಯಾರ್ಥಿಗಳು ತಮ್ಮ ಕುಟುಂಬಗಳ ಹಿನ್ನೆಲೆ ತಂದೆ-ತಾಯಿಗಳ ಆಶಯವನ್ನು ಮೆಲುಕು ಹಾಕಿ ಗುರಿ ಸಾಧಿಸಲು ಪ್ರೇರಣೆ ಆಗುತ್ತದೆ. ತಮ್ಮ ಭವಿಷ್ಯ ಉಜ್ವಲಗೊಳ್ಳಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳ ದೆಸೆಯಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ದೂರದರ್ಶನ ಹಾಗೂ ಮೊಬೈಲ್‌ಗಳಿಂದ ದೂರ ಸರಿದು ತಮ್ಮ ಗುರಿ ಸಾಧನೆಗೆ ಕಷ್ಟಪಟ್ಟು ವ್ಯಾಸಂಗ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕೆ.ಜಿ. ಪ್ರಕಾಶ್‌ಮೂರ್ತಿ, ಗಂಗಮ್ಮ, ಶಿವಕುಮಾರ್, ರವೀಶ್ ಮತ್ತಿತರರು ಉಪಸ್ಥಿತರಿದ್ದರು.


































