
ಬೀದರ್, ಆ ೦೬: ಯುವಜನತೆ ದುಷ್ಚಟ, ದುರ್ಗುಣ, ದುರಾಚಾರ, ದುರ್ಬುದ್ದಿ, ದುರುಳುತನ, ದುರಹಂಕಾರ, ದುರ್ವರ್ತನೆಗಳಿಂದ ದೂರರಾದರೆ ನಶೆಮುಕ್ತ ಹಾಗೂ ಸಶಕ್ತ ಭಾರತವಾಗಿ ಪರಿವರ್ತನೆಯಾಗಲಿದೆ ಎಂದು ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ವಿದ್ಯಾ ಪಾಟೀಲ ತಿಳಿಸಿದರು.
ಗುರುವಾರ ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ನಶೆಮುಕ್ತ ಭಾರತ ಅಭಿಯಾನದಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಒಳ್ಳೆಯ ಪ್ರಜಾಪ್ರಭುತ್ವದಲ್ಲಿ ನಾಯಕರನ್ನು ಪ್ರಶ್ನಿಸುವುದು ಅತ್ಯಗತ್ಯ; ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ. ಆದರೆ, ಇತ್ತೀಚಿನ ಪ್ರತಿಭಟನೆಗಳ ವೇಳೆ ಯುವಕರು ಬಳಸಿದ ಭಾಷೆ ಮತ್ತು ವರ್ತನೆ ಪೋಷಕರು ಹಾಗೂ ಶಿಕ್ಷಕರಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿದೆ. ಹಿರಿಯರು ಮತ್ತು ಗುರುಗಳಿಂದ ಮಕ್ಕಳಿಗೆ ಸರಿಯಾದ ‘ಸಂಸ್ಕಾರ’ ಸಿಗುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಯುವಕರು ದಾರಿ ತಪ್ಪಿದ್ದರೆ, ಅದನ್ನು ತಿದ್ದಿ ಸರಿಯಾದ ಮಾರ್ಗಕ್ಕೆ ತರುವ ಜವಾಬ್ದಾರಿ ಹಿರಿಯರ ಮೇಲಿದೆ. ಹಳೆಯ ಕಾಲದಂತೆ ಪ್ರತಿಯೊಂದಕ್ಕೂ ಕಠಿಣ ಶಿಕ್ಷೆ ನೀಡುವ ಪಾಲನಾ ಶೈಲಿ ಈಗಿನ ಕಾಲಕ್ಕೆ ಸೂಕ್ತವಲ್ಲ. ಪೋಷಕರು ಮಕ್ಕಳೊಂದಿಗೆ ಮಿತ್ರರಂತೆ ಬೆರೆತು, ಅವರು ತಮ್ಮ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವAತಹ ವಿಶ್ವಾಸವನ್ನು ಮೂಡಿಸಬೇಕು ಎಂದರು.
ಇAದಿನ ದಿನಗಳಲ್ಲಿ ಮಕ್ಕಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರö್ಯ ಸಿಗುತ್ತಿರುವುದು ಸಂತಸದ ವಿಚಾರ. ಆದರೆ, ಪ್ರತಿ ಸ್ವಾತಂತ್ರö್ಯದೊAದಿಗೂ ಒಂದು ದೊಡ್ಡ ಜವಾಬ್ದಾರಿ ಇರುತ್ತದೆ ಎಂಬುದನ್ನು ಮಕ್ಕಳಿಗೆ ಕಡ್ಡಾಯವಾಗಿ ಅರ್ಥಮಾಡಿಸಬೇಕಿದೆ. ಮೊಬೈಲ್ ಗೀಳು: ಇಂದಿನ ಅತಿದೊಡ್ಡ ವ್ಯಸನ ಹಿಂದಿನ ಕಾಲದಲ್ಲಿ ಧೂಮಪಾನ ಅಥವಾ ಮದ್ಯಪಾನವನ್ನು ಮಾತ್ರ ವ್ಯಸನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಆಧುನಿಕ ದಿನಗಳಲ್ಲಿ ಹೊಸ ರೀತಿಯ ಡ್ರಗ್ಸ್ ಗಳ ಜೊತೆಗೆ ಅತಿ ದೊಡ್ಡ ನಶೆಯಾಗಿ ಕಾಡುತ್ತಿರುವುದು ‘ಮೊಬೈಲ್ ಫೋನ್’.
ಮೊಬೈಲ್ ಗೀಳು ಕೇವಲ ಮಕ್ಕಳನ್ನಷ್ಟೇ ಅಲ್ಲ, ಪೋಷಕರನ್ನೂ ಆವರಿಸಿದೆ. ಮಕ್ಕಳ ಕೈಯಿಂದ ಮೊಬೈಲ್ ಕಿತ್ತುಕೊಳ್ಳುವ ಮುನ್ನ ಪೋಷಕರು ತಾವೇ ಮೊಬೈಲ್ ಬಳಕೆಯನ್ನು ಮಿತಿಗೊಳಿಸಬೇಕಿದೆ ಎಂದರು.
ಮನುಷ್ಯರನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸುವ ಪ್ರಮುಖ ಗುಣವಾದ ‘ಸ್ವಯಂ-ನಿಯAತ್ರಣ’ ಮತ್ತು ‘ಇಚ್ಛಾಶಕ್ತಿ’ ಇಂದಿನ ಪೀಳಿಗೆಯಲ್ಲಿ ಬೆಳೆಸುವ ತುರ್ತು ಅಗತ್ಯವಿದೆ. ಯುವಕರ ಬುದ್ಧಿಮತ್ತೆ ಮತ್ತು ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬೇಕು. “ನಮ್ಮ ಮಕ್ಕಳಿಗೆ ದೇಶಪ್ರೇಮದ ನಶೆ ಹತ್ತಿಸಬೇಕು. ಸಮಾಜವನ್ನು ಸುಧಾರಿಸುವ ಮತ್ತು ಸಮಾಜಕ್ಕೆ ಕೊಡುಗೆ ನೀಡುವತ್ತ ಅವರ ಆಸಕ್ತಿಯನ್ನು ಬೆಳೆಸಬೇಕು. ನಿಜವಾದ ಸಂತೋಷ ಇರುವುದು ಕ್ಷಣಿಕ ಖುಷಿಗಳಲ್ಲಿ ಅಲ್ಲ, ಬದಲಾಗಿ ಸಮಾಜಮುಖಿ ಕೆಲಸಗಳಲ್ಲಿ” ಎಂದು ವಿದ್ಯಾ ಕರೆ ನೀಡಿದರು.
ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ಜಿ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ, ಜನರು ನೆಮ್ಮದಿ ಕಂಡುಕೊಳ್ಳಲು ಯಾವುದಾದರೊಂದು ರೀತಿಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ವ್ಯಸನವು ತಾತ್ಕಾಲಿಕವಾಗಿ ದುಃಖವನ್ನು ಮರೆಸಿದರೂ, ಅಂತಿಮವಾಗಿ ಇದು ವ್ಯಕ್ತಿಯನ್ನು, ಆತನ ಕುಟುಂಬವನ್ನು, ಸಂಪತ್ತನ್ನು ಮತ್ತು ಆರೋಗ್ಯವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಕಷ್ಟಪಟ್ಟು ದುಡಿದ ಹಣವೆಲ್ಲ ಆಸ್ಪತ್ರೆಗಳ ಪಾಲಾಗುತ್ತದೆ ಮತ್ತು ಸಮಾಜದಲ್ಲಿ ಗೌರವವೂ ಹಾಳಾಗುತ್ತದೆ ಎಂದರು.
೧೫ ರಿಂದ ೨೦ ವರ್ಷದ ಯುವತಿಯರು ಸಹ ಮುಕ್ತವಾಗಿ ಧೂಮಪಾನದಂತಹ ವ್ಯಸನಗಳಿಗೆ ತುತ್ತಾಗಿರುವುದು ಕಳವಳಕಾರಿ ಸಂಗತಿ. ಮನೆಯವರ ಮಾತುಗಳನ್ನು ಕೇಳದ ಯುವಜನತೆಗೆ ಕೇವಲ ಲೌಕಿಕ ಶಿಕ್ಷಣ ನೀಡಿದರೆ ಸಾಲದು; ಮುಂಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅವರಿಗೆ ‘ರಾಜಯೋಗ’ ಮತ್ತು ಆಧ್ಯಾತ್ಮಿಕತೆಯ ಮೂಲಕ ಆಂತರಿಕ ಶಕ್ತಿಯನ್ನು ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದವರು ನುಡಿದರು.
ಜನರನ್ನು ವ್ಯಸನ ಮುಕ್ತರನ್ನಾಗಿಸಲು ‘ಈಶ್ವರಿ ವಿಶ್ವವಿದ್ಯಾಲಯ’ವು ದೇಶಾದ್ಯಂತ ಮಹತ್ವದ ಅಭಿಯಾನವನ್ನು ಹಮ್ಮಿಕೊಂಡಿದೆ. ಪರಮ ಕಲ್ಯಾಣಕಾರಿಯಾದ ಡಾ. ದಾದಿ ಪ್ರಕಾಶ್ಮಣಿ ಜಿಯವರ ದೃಷ್ಟಿಕೋನದಂತೆ, ಪ್ರತಿಯೊಂದು ಜೀವವನ್ನೂ ರಕ್ಷಿಸಿ, ಭಾರತದ ಆದರ್ಶ ಪ್ರಜೆಯನ್ನಾಗಿ ರೂಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಬಹೆನ್ಜಿ ಹೇಳಿದರು. ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಮನೋಜಕುಮಾರ ಸಮಾರಂಭ ಉದ್ಘಾಟಿಸಿದರು. ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಸಹೋದರ, ಸಹೋದರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.































