Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸ

ಕಲಬುರಗಿ,ಜು 24: ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ರಾಯಚೂರು, ಸರ್ವಜ್ಞ ಮತ್ತು ಜಸ್ಟಿಸ್ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಲಬುರಗಿ ಸಂಯುಕ್ತಾಶ್ರಯದಲ್ಲಿ ನ್ಯಾಯಮೂರ್ತಿ ಡಾ. ಶಿವರಾಜ ವಿ ಪಾಟೀಲ ಸಾಂಸ್ಕøತಿಕ ಭವನದಲ್ಲಿ ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರು ರಚಿಸಿದ “ಮುಂಜಾವಿಗೊಂದು ನುಡಿಕಿರಣಗಳ ದರ್ಶನ” ಎಂಬ ಪ್ರವಚನ ಮಾಲಿಕೆ “ಯುವ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಎಲ್. ಲಕ್ಷ್ಮೀ ನಾರಾಯಣ ಅವರು ಮಾತನಾಡುತ್ತಾ, ಜಸ್ಟಿಸ್ ಶಿವರಾಜ ಪಾಟೀಲ ಅವರ ನುಡಿಮುತ್ತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ. ಮನಸು ಪರಿವರ್ತನೆಯಾಗಿ ಬದುಕು ಸುಂದರವಾಗುತ್ತದೆ ಎಂದರು.
ಮುಂದುವರೆದು ಮಾತನಾಡುತ್ತ, ಶಿಸ್ತು, ಸಂಯಮ, ನಿರಂತರ ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಗುರಿಮುಟ್ಟುವ ಛಲ ಇವುಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಇಲ್ಲಿ ಬರೆಸಿರುವ ಗೌರವಾನ್ವಿತ ನ್ಯಾಯಮೂರ್ತಿ ಶಿವರಾಜ ಪಾಟೀಲರ ನುಡಿಮುತ್ತುಗಳನ್ನು ದಿನಾಲೂ ನೋಡಿ ಪಾಲನೆ ಮಾಡಿದರೆ ಉತ್ತಮ ಸಂಸ್ಕಾರ ದೊಂದಿಗೆ ಒಳ್ಳೆಯ ಅಂಕಗಳು ಬರುತ್ತವೆ ಎಂದರು. ಉತ್ತಮ ಪರಿಸರವಿದ್ದ ಶಾಲೆ, ಶಿಕ್ಷಕರ ಉತ್ತಮ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣವಿದ್ದಲ್ಲಿ ಸಾಧನೆ ಸುಲಭ ಎಂದರು. ಪಾಲಕರು ಬಡವರಿರಲಿ ಅಥವಾ ಶ್ರೀಮಂತರಿರಲಿ ಅವರೆಲ್ಲರ ಆಸೆ ಒಂದೇ ಆಗಿರುತ್ತದೆ, ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶ್ರೇಷ್ಠ ವ್ಯಕ್ತಿಗಳಾಗಿ, ಸಾಧಕರಾಗಿ ಹೊರಹೊಮ್ಮಬೇಕು, ಸಮಾಜದಲ್ಲಿ ಸತ್ಪ್ರಜೆಯಾಗಬೇಕು ಎಂಬುದು. ವಿದ್ಯಾರ್ಥಿಗಳು ಪಾಲಕರ ಆಸೆ ಈಡೇರಿಸಬೇಕು. ಗುರಿಯ ಹಿಂದೆ ಗುರುವಿನ ಆಶೀರ್ವಾದ, ಪೆÇ್ರೀತ್ಸಾಹ, ಮಾರ್ಗದರ್ಶನ ಪಡೆದು ಯಾವುದೇ ಕೆಟ್ಟ ಚಟಕ್ಕೆ ಒಳಗಾಗದೆ, ಹಾನಿಕಾರಕ ವಸ್ತುಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಂಡು ಗುರುಗಳನ್ನು ಗೌರವಿಸುತ್ತಾ, ಪಾಲಕರನ್ನು ಗೌರವಿಸುತ್ತಾ, ಉತ್ತಮ ಸಂಸ್ಕಾರದೊಂದಿಗೆ ಬದುಕು ರೂಪಿಸಿಕೊಳ್ಳಬೇಕೆಂದು ಪ್ರೇರೇಪಿಸಿದರು.
ಮುಖ್ಯ ಅತಿಥಿಗಳಾದ ಖ್ಯಾತ ನೇತ್ರ ತಜ್ಞ ಡಾ. ವಿಶ್ವನಾಥರೆಡ್ಡಿ ಮಾತನಾಡುತ್ತ ಪಿಯು ಎರಡು ವರ್ಷ ಮನಸಿಟ್ಟು ಓದಿದರೆ ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಮುದಗಲ್ ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಅವರು “ಮುಂಜಾವಿಗೊಂದು ನುಡಿಕಿರಣಗಳ ದರ್ಶನ” ಕುರಿತು ಪ್ರವಚನ ನೀಡುತ್ತಾ, “ಈ ಯುಗ ಕಂಡ ಮಹಾಪುರುಷರಾದ ನಾಡೋಜ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ. ಇವರ “ಮುಂಜಾವಿಗೊಂದು ನುಡಿ ಕಿರಣ-365” ಕೃತಿ ಇವರ ಅಮೂಲ್ಯವಾದ ಅನುಭವದಿಂದ ಹೊರಹೊಮ್ಮಿದ ನುಡಿಮುತ್ತುಗಳ ಸಂಗಮವಾಗಿವೆ. ಇವರ ಅನುಭವದ ನುಡಿಮುತ್ತುಗಳನ್ನು ದರ್ಶನ ಮಾಡಿಕೊಂಡರೆ ಬದುಕು ವಿಕಾಸ ಗೊಳ್ಳುತ್ತದೆ ಉಜ್ವಲವಾಗುತ್ತದೆ. ಆರೋಗ್ಯಕರವಾದ ದೇಹ, ಆರೋಗ್ಯಕರವಾದ ಮನಸ್ಸನ್ನು ಹೊಂದಿದ್ದು, ಸನ್ಮಾರ್ಗದಲ್ಲಿ ನಡೆದು ಉತ್ತಮರಾಗಿ ಹೊರಹೊಮ್ಮಬೇಕೆಂಬುದೇ ಈ ಪ್ರವಚನದ ಆಶಯ ಎಂದು ಆಶೀರ್ವದಿಸಿದರು.ಸಂಸ್ಥೆಯ ಸಂಸ್ಥಾಪಕರಾದ ಪೆÇ್ರ. ಚನ್ನಾರಡ್ಡಿ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪೂಜ್ಯ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ನುಡಿಕಿರಣಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಬೆಳಕಾಗಿವೆ, ಆದ್ದರಿಂದ ಇಂಥ ನುಡಿಕಿರಣಗಳ ಪ್ರವಚನ ಎಲ್ಲರೂ ಪಾಲಿಸಬೇಕೆಂದು ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ನೇತ್ರತಜ್ಞರಾದ ಡಾ. ರಾಜೇಶ್ವರಿ ರೆಡ್ಡಿ ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಅಭಿಷೇಕ್ ಚನ್ನಾರಡ್ಡಿ ಪಾಟೀಲ್, ಪ್ರಾಚಾರ್ಯರಾದÀ ವಿನೂತಾ ಆರ್. ಬಿ., ಅನಿತಾ ಕುಲಕರ್ಣಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕುಮಾರಿ ಸಂಸ್ಕøತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ವಿದ್ಯಾವತಿ ನಿರೂಪಿಸಿದರು.