
ಬೆಂಗಳೂರು, ಅ. ೧೪: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾರಿತ್ರ್ಯಹರಣ ಮಾಡುವ ಸಂಚು ನಡೆದಿದ್ದು, ಇದರ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇದೆ ಎಂದು ಹೇಳಿದ್ದಾರೆ. ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ.
“ಸಿದ್ದರಾಮಯ್ಯ ಸಾಹೇಬರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕಾಗಿ ಬೇರೆ ಯಾರು ಮಾತಾಡುವ ಅವಶ್ಯಕತೆ ಇಲ್ಲ. ಏನೇ ಇದ್ದರೂ ಕೂಡ ಕಾನೂನಿನ ಪ್ರಕಾರ ತನಿಖೆ ಮಾಡಿ ಬಯಲಿಗೆ ತರುವುದಕ್ಕೆ ಅವರು ಹೇಳಿದ್ದಾರೆ. ಅದನ್ನು ನಾವು ಮಾಡ್ತೀವಿ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು
“ಯಾರು ಸ್ಟಿಂಗ್ ಸ್ಟಿಂಗ್ ಅಂತಾ ನಿತ್ಯ ಮಾತಾಡ್ತಿದ್ದಾರೆ. ನನ್ನ ಪ್ರಕಾರ ಇದರ ಬಗ್ಗೆ ಅವರಿಗೆ ಹೆಚ್ಚು ಮಾಹಿತಿ ಇದೆ. ಸಮಯ ಸಂದರ್ಭ ಬಂದಾಗ ಅದನ್ನು ತಿಳಿಸುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು “ರೇವಣ್ಣ ಕುಟುಂಬದಂತೆ ಸಿದ್ದರಾಮಣ್ಣನನ್ನು ಮುಗಿಸುವ ಕೆಲಸ ನಡೆದಿದೆ” ಎಂದು ಹೇಳಿದ್ದಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿ”ಕುಮಾರಸ್ವಾಮಿವರು ಕೇಂದ್ರದ ಸಚಿವರು, ಮುಖ್ಯಮಂತ್ರಿಗಳ ಬಗ್ಗೆ ಅವರು ಈ ರೀತಿ ಕ್ಷುಲ್ಲಕವಾಗಿ ಮಾಡೋದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು
“ರೇವಣ್ಣನವರ ಕುಟಂಬದ ಬಗ್ಗೆ ನಾವು ಮಾತಾಡ್ದೀವಾ ಮುಖ್ಯಮಂತ್ರಿಗಳು ಅವರು ಮಾಡಿದ್ದಾ ಹೇಳಿ ಸುಮ್ಮನೆ ಅಪಪ್ರಚಾರ ಮಾಡೋದು ಸರಿಯಲ್ಲ. ವೀಡಿಯೋಗಳನ್ನು ಕಾಂಗ್ರೆಸ್ನವರು ಮಾಡಿದ್ದೀವಾ ಎಂದು ಪ್ರಶ್ನಿಸಿದರು.ರೇವಣ್ಣ ಮಗ ಜೈಲಿನಲ್ಲಿರಲು ಕಾಂಗ್ರೆಸ್ ಕಾರಣನಾ”ರೇವಣ್ಣನವರ ಮಗ ಜೈಲಿನಲ್ಲಿ ಇರೋದಕ್ಕೆ ಕಾಂಗ್ರೆಸ್ ಕಾರಣನಾ ಅವರ ವಿಕೃತ ಮನಸ್ಸಿಗೆ ಕಾಂಗ್ರೆಸ್ ಕಾರಣನಾ ನಿಮ್ಮ ಮನೆ ಮಕ್ಕಳನ್ನು ಸರಿಯಾಗಿ ಬೆಳೆಸಿಲ್ಲ ಅಂದರೆ ಅದಕ್ಕೆ ಕಾಂಗ್ರೆಸ್ಗೆ ಏನ್ರೀ ಸಂಬಂಧ?” ಎಂದು ವಾಗ್ದಾಳಿ ನಡೆಸಿ”ನಾಚಿಕೆ ಆಗಲ್ವಾ ಈ ಮಾತಾಡೋಕೆ? ಸ್ಟಿಂಗ್ ಮಾಡಿಸಿದ್ದು ಏನು ಡಿ.ಕೆ. ಶಿವಕುಮಾರ್? ಅಥವಾ ಸಿದ್ದರಾಮಯ್ಯ ನವರು ಮಾಡಿಸಿರೋದಾ? ನಿಮ್ಮ ಮನೆಯ ಮಕ್ಕಳು ಮಾಡಿರೋ ಕೆಲಸ. ಅದಕ್ಕೆ ಕಾಂಗ್ರೆಸ್ಗೆ ಏನ್ರೀ ಸಂಬಂಧ?” ಎಂದು ಆಕ್ರೋಶ ಹೊರ ಹಾಕಿದರು.
“ಸ್ವಲ್ಪ ನಾಲಿಗೆ ಬಿಗಿಹಿಡಿದು ಮಾತಾಡೋದನ್ನು ಕಲಿಯಿರಿ. ಕಾಂಗ್ರೆಸ್ ಯಾವ ಕುಟುಂಬಗಳ ಮೇಲೂ ವೈಯಕ್ತಿಕ ದ್ವೇಷ ತೋರಿಸಿಲ್ಲ, ತೋರಿಸೋದಿಲ್ಲ. ನಮ್ಮ ರಾಜಕೀಯ ಅಂತಹದ್ದಲ್ಲ” ಎಂದರು
ಸಿಬಿಐ ತನಿಖೆ ಏಕೆ ಬೇಕು
“ಸಿಬಿಐ ತನಿಖೆ ಏನತಕ್ಕೆ ಬೇಕು? ಸಿಬಿಐಗೆ ಸಿಬ್ಬಂದಿಗಳನ್ನು ಎಲ್ಲಿಂದ ತರುತ್ತಾರೆ? ಅದಕ್ಕೆ ನಾವೇ ತಾನೇ ಸಿಬ್ಬಂದಿಗಳನ್ನು ಕೊಡಬೇಕು. ಹಿಂದಿನ ಎರಡು ಕೇಸ್ಗಳನ್ನೇ ಅವ್ರು ಇನ್ನೂ ಮುಗಿಸಿಲ್ಲ. ಅವ್ರೇ ಪತ್ರ ಬರೆಯುತ್ತಿದ್ದಾರೆ ಸಿಬ್ಬಂದಿಗಳನ್ನು ಕೊಡಿ, ನಾವು ಕೇಸ್ಗಳನ್ನು ಮುಗಿಸಬೇಕೆಂದು” ಎಂದು ಹೇಳಿದ್ದಾರೆ.
“ರಾಜ್ಯದ ಪೊಲೀಸರೇ ಇದರ ತನಿಖೆಯನ್ನು ಮಾಡುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಕುಮಾರಸ್ವಾಮಿಯವರೇ, ತಮ್ಮ ಕುರ್ಚಿಗೆ ತಾವೇ ಅಗೌರವ ತರಿಸಿಕೊಳ್ಳುತ್ತಿದ್ದೀರಾ? ನಮ್ಮ ಕುಟುಂಬದ ಸಾಧನೆ ಅಂತಾ ಹೇಳಿಕೊಳ್ಳುತ್ತೀರಾ? ಈಗ ನೀವೇ ನಿಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಾ” ಎಂದು ತಿರುಗೇಟು ನೀಡಿದರು.
“ಮಾಧ್ಯಮಗಳಿಗೆ ಮಾತಾಡುವ ಮುನ್ನ ಮೊದಲು ನಿಮ್ಮ ಹಿಂದಿನ ಮಾಧ್ಯಮ ಸಂಸ್ಥೆ ನಡೆಸಿದ್ರಲ್ಲ, ಆ ಸಂಸ್ಥೆಗಳ ನೌಕರರನ್ನು ಕೇಳಿ” ಪ್ರಿಯಾಂಕ್ ವ್ಯಂಗ್ಯವಾಗಿ ಹೇಳಿದರು.

























