Home ಜಿಲ್ಲೆ ಬೆಂಗಳೂರು ವಿಪಕ್ಷ ನಾಯಕರ ಧರಣಿ ಹಾಸ್ಯಾಸ್ಪದ

ವಿಪಕ್ಷ ನಾಯಕರ ಧರಣಿ ಹಾಸ್ಯಾಸ್ಪದ

ಬೆಂಗಳೂರು,ಅ.೩- ದೇಶದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೈಜಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ತನ್ನ ಮತದಾನದ ಹಕ್ಕನ್ನ ಪಡೆಯಲು ಹಾಗೂ ಒದಗಿಸಿಕೊಡಲು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟದ ಬಗ್ಗೆ ಬಿಜೆಪಿಯ ಅಂಧ ಭಕ್ತರು ಹಾಗೂ ಕಾನೂನಿನ ಹಾಗೂ ಪ್ರಜಾಪ್ರಭುತ್ವದ ಅರಿವಿಲ್ಲದ ವಿರೋಧ ಪಕ್ಷದ ನಾಯಕರು ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿರುವುದು ಹಾಸ್ಯಸ್ಪದ ಹಾಗೂ ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ ಎಂದು ಕೆಪಿಸಿಸಿ ಪ್ರದಾನಕಾರ್ಯದರ್ಶಿ ಎಸ್ ಮನೋಹರ್ ತಿಳಿಸಿದ್ದಾರೆ.


ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕಾದರೆ ಹಾಗೂ ಗಟ್ಟಿಯಾಗಬೇಕಾದರೆ ಒಂದು ಪ್ರಾಮಾಣಿಕ ನೈಜ ಸರ್ಕಾರ ಸ್ಥಾಪನೆಗೆ ಮತದಾರರೇ ಮೂಲ ಕಾರಣಕರ್ತರು, ದೇಶದಲ್ಲಿ ಮೋದಿಯ ಸರ್ಕಾರದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಬಿಜೆಪಿ ಅಂಧ ಭಕ್ತರು ಕಣ್ಣಾರೆ ಕಂಡು ನಿದ್ರಿಸುತ್ತಿದ್ದಾರೆ ಅದನ್ನು ಪ್ರಶ್ನಿಸಲು ಹೋದರೆ ಹಾಗೂ ಹೋರಾಟ ನಡೆಸಿ ದೇಶದ ನಾಗರಿಕರಿಗೆ ಮತದಾನದ ಹಕ್ಕನ್ನ ನೀಡಬೇಕೆಂದು ಹೋರಾಟ ನಡೆಸಿದರೆ ಹೋರಾಟ ನಡೆಸಿದವರ ವಿರುದ್ಧವೇ ದೂರು ಸಲ್ಲಿಸುತ್ತಿರುವುದು ದೇಶದ ಇತಿಹಾಸದಲ್ಲಿ ಇದೆ ಮೊದಲು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವುದು ಅವರ ಹಕ್ಕು ಮತದಾನ ಮಾಡಲು ಅವರಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸುಮಾರು ಎರಡು ವರ್ಷಗಳಿಂದ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ರವರು ಇಡೀ ದೇಶ ವ್ಯಾಪ್ತಿ ಜಾಗೃತಿ ಮೂಡಿಸಿ ವೋಟ್ ಚೋರಿ ಎಂಬ ಹಗಲು ದರೋಡೆಯನ್ನು ನಡೆಸಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ,


ಚುನಾವಣಾ ಆಯೋಗದ ವಿರುದ್ಧ ಹೋರಾಟ ನಡೆಸಿದರೆ ಪ್ರತಿ ಹಂತದಲ್ಲಿ ಬಿಜೆಪಿ ನಾಯಕರು ಇದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಹಾಗಾದರೆ ಇವರು ಮತದಾರರ ವಿರೋಧಿಗಳು ಎಂಬುದು ಈಗ ಸಾಬೀತಾಗಿದೆ,
ದೇಶದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ರವರ ಸರ್ಕಾರ ಅದು ಪ್ರಜಾಪ್ರಭುತ್ವದ ಅಡಿಯಲ್ಲಿ ಸಂಪೂರ್ಣವಾಗಿ ನೈಜ್ಯ ಮತದಾರರಿಗೆ ಹಕ್ಕನ್ನು ನೀಡಿ ಅಧಿಕಾರ ನಡೆಸುತ್ತಿರುವ ಸರ್ಕಾರ ಅಲ್ಲ ಎಂಬುದು ಈಗ ಚುನಾವಣೆ ಆಯೋಗ ಕೈಗೊಂಡಿರುವ ನಿರ್ಧಾರ ಹಾಗೂ ಮರುಪರಿಶೀಲನೆ ಆದೇಶದಲ್ಲಿ ಬಹಿರಂಗವಾಗಿದೆ,


ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ನಡೆಯುತ್ತಿರುವ ದೇಶವ್ಯಾಪ್ತಿ ಚಳುವಳಿಯ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ರಾದ ಎ.ಆನಂದ,ಕುಶಾಲ್ ಹರವೇಗೌಡ, ಪುಟ್ಟರಾಜು, ಮಾಧವ ಹನೂರು ಅವರು ಆಗ್ರಹಿಸಿದ್ದಾರೆ.