
ನವದೆಹಲಿ,ಜು.24-ದೇಶಾದ್ಯಂತ ಮಾನ್ಸೂನ್ ಮಳೆ ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಂಡಿದ್ದು, ಬಹುತೇಕ ಎಲ್ಲಾ ರಾಜ್ಯಗಳನ್ನು ಆವರಿಸಿಕೊಂಡಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಮುಂದಿನ 9 ಗಂಟೆಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಒಟ್ಟು 16 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಮಳೆಯೊಂದಿಗೆ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಜಾಗರೂಕರಾಗಿರಲು ಇಲಾಖೆ ಎಚ್ಚರಿಸಿದೆ.
ಪೂರ್ವ ರಾಜ್ಯಗಳಲ್ಲಿ ತೊಂದರೆ: ಪೂರ್ವ ಭಾರತದ ರಾಜ್ಯಗಳಲ್ಲಿ ಸಿಡಿಲು, ಮಿಂಚು ಹಾಗೂ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ.
ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸುವವರಿಗೆ ಎಚ್ಚರಿಕೆ: ಬೆಟ್ಟ-ಗುಡ್ಡಗಳಿರುವ ರಾಜ್ಯಗಳಿಗೆ ಪ್ರಯಾಣ ಬೆಳೆಸುವ ಸಾರ್ವಜನಿಕರು ಹೊರಡುವ ಮೊದಲು ಹವಾಮಾನ ವರದಿಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಭಾರಿ ಮಳೆಯಾಗಲಿರುವ 16 ರಾಜ್ಯಗಳು:
ಉತ್ತರ ಪ್ರದೇಶ, ಬಿಹಾರ, ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಛತ್ತೀಸ್‍ಗಢ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಗುಜರಾತ್ ಮತ್ತು ಮಹಾರಾಷ್ಟ್ರ.
ದೆಹಲಿಯಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜುಲೈ 24 ರಂದು ಗರಿಷ್ಠ ತಾಪಮಾನ 32ಲಿಅ ಮತ್ತು ಕನಿಷ್ಠ ತಾಪಮಾನ 28ಲಿಸಿ ದಾಖಲಾಗುವ ನಿರೀಕ್ಷೆಯಿದೆ. (ಸೂಚನೆ: ಜೂನ್ 5 ರಂದೂ ದೆಹಲಿಯಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿತ್ತು).
ಉತ್ತರ ಪ್ರದೇಶ
ಉತ್ತರ ಪ್ರದೇಶದ ಮೀರತ್, ಮುಜಾಫರ್ ನಗರ, ಆಗ್ರಾ, ಮಥುರಾ, ಲಕ್ನೋ, ಕಾನ್ಪುರ್, ಬಿಜ್ನೋರ್, ಬರೇಲಿ, ಹರ್ದೋಯಿ, ಫರೂಕಾಬಾದ್, ಸಿತಾಪುರ್, ಶಹಜಹಾನ್‍ಪುರ, ಬದೌನ್, ರಾಂಪುರ, ಪಿಲಿಭಿತ್, ಬಾರಾಬಂಕಿ, ಉನ್ನಾವೋ ಹಾಗೂ ಕನೌಜ್ ಜಿಲ್ಲೆಗಳಲ್ಲಿ ಗಂಟೆಗೆ 70 ರಿಂದ 80 ಕಿ.ಮೀ. ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
- ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ:
ಉತ್ತರಾಖಂಡ: ಬಾಗೇಶ್ವರ, ಅಲ್ಮೋರಾ, ಚಂಪಾವತ್, ನೈನಿತಾಲ್, ಡೆಹ್ರಾಡೂನ್, ಪಿಥೋರಗಢ, ಚಮೋಲಿ, ಹರಿದ್ವಾರ, ರುದ್ರಪ್ರಯಾಗ ಮತ್ತು ಋಷಿಕೇಶಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಹಿಮಾಚಲ ಪ್ರದೇಶ: ಮಂಡಿ, ಕುಲ್ಲು, ಶಿಮ್ಲಾ, ಸೋಲನ್, ಬಿಲಾಸ್ಪುರ್, ಲಹೌಲ್-ಸ್ಪಿತಿ, ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಸಿಡಿಲು ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.































