
ಸುಳ್ಯ:ಸಂಚಾರಕ್ಕೆ ದುಸ್ತರವಾಗಿದ್ದ ಐವರ್ನಾಡು ಗ್ರಾಮದ ಬಾಂಜಿಕೋಡಿ ವಾರ್ಡಿನ ಚೆಮ್ನೂರು – ಪಾರ್ಚೋಡು ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ಸುಮಾರು ೧೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಲಾಯಿತು.
ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಮತ್ತು ಊರಿನ ಹಿರಿಯರಾದ ರಾಘವ ಚೆಮ್ನೂರು ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಐವರ್ನಾಡು ಸಹಕಾರಿ ಸಂಘದ ನಿರ್ದೇಶP ಗೋಪಾಲಕೃಷ್ಣ ಚೆಮ್ನೂರು, ಗ್ರಾ.ಪಂ. ಮಾಜಿ ಸದಸ್ಯರಾದ ರಂಜನ್ ಕುಮಾರ್ ಮೂಲೆತೋಟ, ರೋಹಿತ್ ಬಾಂಜಿಕೋಡಿ, ಲೋಕೇಶ್ ಚೆಮ್ನೂರು, ಪ್ರೇಮಾನಂದ ಪಾರ್ಚೋಡು, ರಂಜಿತ್ ಮೂಲೆತೋಟ, ದೀಕ್ಷಿತ್ ಚೆಮ್ನೂರು, ದಯಾನಂದ ಪಾರ್ಚೋಡು, ವಿಜಯಾನಂದ ಪಾರ್ಚೋಡು, ಪ್ರವೀಣ ಚೆಮ್ನೂರು, ಪ್ರಸನ್ನ ಚೆಮ್ನೂರು, ಧೀರಜ್ ಚೆಮ್ನೂರು, ನಿಯತ್ ಪಾರ್ಚೋಡು, ಚಂದ್ರಶೇಖರ ಖಂಡಿಗೆಮೂಲೆ, ಜಾನಪ್ಪ ಬೆಳ್ಳಾರೆ, ಹಾಗೂ ಊರಿನವರು ಉಪಸ್ಥಿತರಿದ್ದರು.


































