Home ಜಿಲ್ಲೆ ಮಂಗಳೂರು “ಸಮಸ್ಯೆಗಳ ನಿವಾರಣೆಯೇ ವಿಜ್ಞಾನ ಮೇಳದ ಮುಖ್ಯ ಉದ್ದೇಶ ವಾಗಬೇಕು” ಜನಾಬ್ ಮುಹಮ್ಮದ್ ಅಬ್ದುಲ್ಲಾ ಜಾವೇದ್

“ಸಮಸ್ಯೆಗಳ ನಿವಾರಣೆಯೇ ವಿಜ್ಞಾನ ಮೇಳದ ಮುಖ್ಯ ಉದ್ದೇಶ ವಾಗಬೇಕು” ಜನಾಬ್ ಮುಹಮ್ಮದ್ ಅಬ್ದುಲ್ಲಾ ಜಾವೇದ್

ಉಡುಪಿ, ಆಗಸ್ಟ್ ೨೨: “ನಮ್ಮ ಸುತ್ತಲಿನ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಗಮನಿಸಬೇಕು, ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು ಮತ್ತು ವೈಜ್ಞಾನಿಕ ವಿಧಾನದಲ್ಲಿ ಉತ್ತರ ಹುಡುಕಬೇಕು. ಆಗ ಮಾತ್ರ ವಿಜ್ಞಾನ ಮೇಳವು ನಿಜವಾದ ಅರ್ಥದಲ್ಲಿ ಸಂಶೋಧನೆಯ ವೇದಿಕೆಯಾಗುತ್ತದೆ” ಎಂದು ಂಎ ಂಛಿಚಿಜemಥಿ ಜಿoಡಿ ಖeseಚಿಡಿಛಿh & ಆeveಟoಠಿmeಟಿಣನ ಮುಖ್ಯಸ್ಥರಾದ ಜನಾಬ್ ಮುಹಮ್ಮದ್ ಅಬ್ದುಲ್ಲಾ ಜಾವೇದ್ ಹೇಳಿದರು.
ಉಡುಪಿಯ ಆoಟಿ ಃosಛಿo ಊಚಿಟಟನಲ್ಲಿ ನಡೆದ ೨ನೇ ಉಡುಪಿ ಜಿಲ್ಲಾ ಅಂತರ ಶಾಲಾ ವಿಜ್ಞಾನ ಮೇಳ?೨೦೨೬ರ ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ವಿಜ್ಞಾನ ಮೇಳವನ್ನು ಕೇವಲ ಸಿದ್ಧಪಡಿಸಿದ ಮಾದರಿಗಳನ್ನು ಪ್ರದರ್ಶಿಸುವ ಸ್ಪರ್ಧೆಯಾಗಿ ನೋಡದೆ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆ ಬೆಳೆಸುವ ಪ್ರಯತ್ನವಾಗಿ ರೂಪಿಸಬೇಕು ಎಂದು ಹೇಳಿದರು.
“ವಿದ್ಯಾರ್ಥಿಗಳಿಗೆ ನಾವು ಎಲ್ಲ ಪ್ರಶ್ನೆಗಳಿಗೂ ಸಿದ್ಧ ಉತ್ತರಗಳನ್ನು ನೀಡಬೇಕಾಗಿಲ್ಲ. ಬದಲಾಗಿ, ‘ಏಕೆ?’, ‘ಹೇಗೆ?’, ‘ಇದಕ್ಕೆ ಸಾಕ್ಷಿ ಏನು?’ ಎಂಬ ಪ್ರಶ್ನೆಗಳನ್ನು ಕೇಳಲು ಕಲಿಸಬೇಕು. ಒಂದು ಒಳ್ಳೆಯ ಪ್ರಶ್ನೆಯಿಂದ ಸಂಶೋಧನೆ ಆರಂಭವಾಗುತ್ತದೆ” ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಶಿಕ್ಷಕರಿಗೆ ವೈಜ್ಞಾನಿಕ ವಿಧಾನ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಸಂಶೋಧನೆಗೆ ಸೂಕ್ತವಾದ ಪ್ರಶ್ನೆಯನ್ನು ರೂಪಿಸುವುದು, hಥಿಠಿoಣhesis ಮಂಡಿಸುವುದು, ಪ್ರಯೋಗ ನಡೆಸುವುದು, ಮಾಹಿತಿಯನ್ನು ದಾಖಲಿಸುವುದು ಹಾಗೂ ಅಂತಿಮ ಫಲಿತಾಂಶವನ್ನು ಮಂಡಿಸುವುದನ್ನು ಚಟುವಟಿಕೆಗಳ ಮೂಲಕ ವಿವರಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿರುವ ನೈಜ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಸಂಶೋಧನೆಯೊಂದಿಗೆ ಜೋಡಿಸುವ ಅಗತ್ಯವನ್ನು ಜಾವೇದ್ ಅವರು ವಿಶೇಷವಾಗಿ ಒತ್ತಿಹೇಳಿದರು.
ಉಡುಪಿ ಜಿಲ್ಲೆಯ ಕರಾವಳಿಯ ಸುಮಾರು ೩೪.೭% ಭಾಗ ಕರಾವಳಿ ಸವೆತಕ್ಕೆ ಒಳಗಾಗಿದೆ. ೨೦೨೬ರ ಅಧ್ಯಯನವೊಂದರಲ್ಲಿ ಉಡುಪಿಯಲ್ಲಿ ಸಾಮಾನ್ಯವಾಗಿ ಸೇವಿಸುವ ಕೆಲವು ತಾಜಾ ನೀರಿನ ಮೀನುಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಉಪಸ್ಥಿತಿಯೂ ವರದಿಯಾಗಿದೆ. ಇದರ ಜೊತೆಗೆ, ಜಿಲ್ಲೆಯಲ್ಲಿ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.
“ಇವು ಕೇವಲ ಸುದ್ದಿಗಳಲ್ಲ; ನಮ್ಮ ವಿದ್ಯಾರ್ಥಿಗಳ ಸಂಶೋಧನೆಗೆ ಉತ್ತಮ ವಿಷಯಗಳು. ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಮ್ಮ ವಿದ್ಯಾರ್ಥಿಗಳೇ ಅಧ್ಯಯನ ಮಾಡಿ, ಅದರ ಹಿಂದಿರುವ ಕಾರಣಗಳನ್ನು ತಿಳಿದುಕೊಂಡು, ಸಾಧ್ಯವಾದ ಪರಿಹಾರಗಳನ್ನು ಹುಡುಕಬೇಕು. ಈ ಮೂಲಕ ಅವರ ಸಂಶೋಧನೆಯ ಪ್ರಯೋಜನ ಸಮಾಜಕ್ಕೂ ತಲುಪಬೇಕು” ಎಂದು ಅವರು ಹೇಳಿದರು.
ಈ ಉದ್ದೇಶದಿಂದ ನಾಲ್ಕನೇ ತರಗತಿ ಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಶೋಧನಾ ಆಧಾರಿತ ಯೋಜನೆಗಳನ್ನು ಮಂಡಿಸಲು ಅವಕಾಶ ನೀಡಲಾಗಿದೆ. ಯೋಜನೆಗಳನ್ನು ಐiಜಿe Sಛಿieಟಿಛಿes, Phಥಿsiಛಿಚಿಟ Sಛಿieಟಿಛಿes ಮತ್ತು ಇಟಿviಡಿoಟಿmeಟಿಣಚಿಟ Sಛಿieಟಿಛಿes ವಿಭಾಗಗಳಲ್ಲಿ ಸಲ್ಲಿಸಬಹುದು.
ಯೋಜನೆ ಸಲ್ಲಿಕೆಗೆ ೭ ಸೆಪ್ಟೆಂಬರ್ ೨೦೨೬ ಕೊನೆಯ ದಿನಾಂಕವಾಗಿದ್ದು, ೨ನೇ ಉಡುಪಿ ಜಿಲ್ಲಾ ಅಂತರ ಶಾಲಾ ವಿಜ್ಞಾನ ಮೇಳವು ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಸಾಲಿಹಾತ್ ಶಾಲೆಯ ಅಕಾಡೆಮಿಕ್ ಮುಖ್ಯಸ್ಥರಾದ ಅಬ್ದುಲ್ ಹಸೀಬ್ ತರಫದಾರ್ ನೆರವೇರಿಸಿದರು. ಸಮಾರೋಪ ಭಾಷಣವನ್ನು ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಜನಾಬ್ ಅಸ್ಲಾಂ ಹೈಕಾಡಿ ಮಾಡಿದರು.
ಕೊನೆಯಲ್ಲಿ ಈ ಶಿಕ್ಷಕರ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಲು ಸಾಧ್ಯವಾಗದ ಶಾಲೆಗಳಿಗೂ ವಿಜ್ಞಾನ ಮೇಳದಲ್ಲಿ ಭಾಗವಹಿಸಲು ಅವಕಾಶವಿದ್ದು, ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಈ ಸಂಶೋಧನಾ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಆಯೋಜಕರು ಮನವಿ ಮಾಡಿದರು.