Home ಸುದ್ದಿ ರಾಷ್ಟ್ರೀಯ ವರ್ಷಾಂತ್ಯಕ್ಕೆ 114 ರಫೇಲ್ ಖರೀದಿ ಒಪ್ಪಂದ ಅಂತಿಮ

ವರ್ಷಾಂತ್ಯಕ್ಕೆ 114 ರಫೇಲ್ ಖರೀದಿ ಒಪ್ಪಂದ ಅಂತಿಮ

ನವದೆಹಲಿ,ಅ.2:-ಭಾರತೀಯ ವಾಯುಪಡೆಯ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿ 114 ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಈ ಹಣಕಾಸು ವರ್ಷದ ಅಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


114 ರಫೇಲ್ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬಿಡ್‍ಗಳನ್ನು ಸದ್ಯ ಔಪಚಾರಿಕವಾಗಿ ಪರಿಶೀಲಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯ ಮುಂದಿನ ಹಂತಗಳನ್ನು ಪೂರ್ಣಗೊಳಿಸಿ, ಈ ವರ್ಷದ ಅಂತ್ಯದೊಳಗೆ ಖರೀದಿ ಪ್ರಕ್ರಿಯೆಯಲ್ಲಿ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಹೊಸ ಒಪ್ಪಂದದಲ್ಲಿ ಹಿಂದಿನ ಖರೀದಿಗಳಿಗಿಂತ ಹೆಚ್ಚಿನ ಪ್ರಮಾಣದ ಸ್ವದೇಶೀಕರಣಕ್ಕೆ ಭಾರತ ಒತ್ತು ನೀಡುತ್ತಿದೆ. ಬೈ ಅಂಡ್ ಮೇಕ್' ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯ ರಫೇಲ್ ವಿಮಾನಗಳನ್ನು ಭಾರತದಲ್ಲೇ ಜೋಡಿಸುವ ಉದ್ದೇಶವಿದೆ. ಭಾರತೀಯ ಶಸ್ತ್ರಾಸ್ತ್ರಗಳು ಹಾಗೂ ಸ್ವದೇಶಿ ವ್ಯವಸ್ಥೆಗಳನ್ನು ರಫೇಲ್ ವಿಮಾನಗಳಲ್ಲಿ ಅಳವಡಿಸುವ ಯೋಜನೆಯೂ ಇದೆ. ಈಗಾಗಲೇ ಖರೀದಿಸಿರುವ ರಫೇಲ್ ಮೆರೈನ್ ವಿಮಾನಗಳಲ್ಲೂ ಭಾರತೀಯ ಶಸ್ತ್ರಾಸ್ತ್ರಗಳ ಏಕೀಕರಣಕ್ಕೆ ಫ್ರಾನ್ಸ್ ಒಪ್ಪಿಗೆ ನೀಡಿದೆ ಎಂದು ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಬಾರಿ ಯೋಜನೆಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಾಗುತ್ತಿದ್ದು, ವಿಮಾನಗಳ ದೊಡ್ಡ ಪ್ರಮಾಣದ ಜೋಡಣೆ ಭಾರತದಲ್ಲೇ ನಡೆಯಲಿದೆ. ಜೊತೆಗೆ ಸ್ವದೇಶಿ ತಂತ್ರಜ್ಞಾನ, ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳ ಬಳಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ವಿವರಿಸಿದ್ದಾರೆ. ದೇಶೀಯ ಯುದ್ಧವಿಮಾನ ಅಭಿವೃದ್ಧಿ ಯೋಜನೆಯಾದ ಐಅಂ ಒಞ2 (ತೇಜಸ್ ಒಞ2) ಬಗ್ಗೆಯೂ ರಾಜೇಶ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಯೋಜನೆ ಮುಂದುವರಿದಿದ್ದು, ಮುಂದಿನ ವರ್ಷದ ಮಧ್ಯಭಾಗದಲ್ಲಿ ಮೊದಲ ಪರೀಕ್ಷಾರ್ಥ ಹಾರಾಟ ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.ಮೂಲಮಾದರಿಗಳು ಸಿದ್ಧವಾದ ಬಳಿಕ ಭಾರತೀಯ ವಾಯುಪಡೆ ಅವುಗಳನ್ನು ಮೌಲ್ಯಮಾಪನ ಮಾಡಲಿದೆ. ನಂತರ ಅಗತ್ಯಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ತೇಜಸ್ ಒಞ2 ಅಭಿವೃದ್ಧಿಯಲ್ಲಿ ಹಂತ ಹಂತವಾಗಿ ಸುಧಾರಣೆ ಮಾಡುವ ಸ್ಪೈರಲ್ ಡೆವಲಪ್‍ಮೆಂಟ್’ ವಿಧಾನ ಅನುಸರಿಸಲಾಗುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಊಂಐ) ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಯಲ್ಲಿ ಖಾಸಗಿ ವಲಯ ಮತ್ತು ಎಂಎಸ್‍ಎಂಇ ಸಂಸ್ಥೆಗಳಿಗೂ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ.


ಭಾರತದ ಐದನೇ ತಲೆಮಾರಿನ ಯುದ್ಧವಿಮಾನ ಯೋಜನೆ ಕೂಡ ಮುಂದಿನ ಹಂತ ತಲುಪಿದೆ. ಆಯ್ಕೆಯಾಗಿರುವ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. ಯೋಜನೆಯ ಸಂಕೀರ್ಣತೆ ಹಾಗೂ ಕೆಲವು ಸಂಸ್ಥೆಗಳು ಈ ಕ್ಷೇತ್ರಕ್ಕೆ ಮೊದಲ ಬಾರಿಗೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಸ್ತಾವನೆ ಸಲ್ಲಿಸಲು ಹೆಚ್ಚುವರಿ ಸಮಯ ನೀಡಲಾಗುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ.


ವಿದೇಶಿ ಐದನೇ ತಲೆಮಾರಿನ ಯುದ್ಧವಿಮಾನ ಯೋಜನೆಯನ್ನು ಖರೀದಿಸುವ ಕುರಿತು ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಭಾರತದ ಪ್ರಮುಖ ಗಮನ ಂಒಅಂ ಯೋಜನೆಯ ಮೇಲೆಯೇ ಇದೆ ಎಂದು ರಾಜೇಶ್ ಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.