
ಚಿಂಚೋಳಿ,ಅ.2-ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಎಸ್.ಪಾಟೀಲ (ಕೊಡಲಹಂಗರಗಾ) ಅವರ ಆದೇಶದಂತೆ, ಚಿಂಚೋಳಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಭಾರತ ದೇಶದ ರಕ್ಷಣೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ 4ನೇ ವರ್ಷದ ಜಯಂತಿ ಕಾರ್ಯಕ್ರಮದ ಕುರಿತು ಚಂದಾಪುರ ಪಟ್ಟಣದ ಹನುಮಾನ ಮಂದಿರದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷರಾದ ರಮೇಶ್ ಪಡಶೆಟ್ಟಿ ಅವರು ಮಾತನಾಡಿ, ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಆಚರಿಸುತ್ತಿದೆ. ಅದೇ ರೀತಿ ಚಿಂಚೋಳಿ ತಾಲೂಕಿನಲ್ಲಿಯೂ ಅಕ್ಟೋಬರ್ 23ರಂದು ಬೆಳಿಗ್ಗೆ 10:30 ಗಂಟೆಗೆ ಚಂದಾಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಿದರು.
ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ ಚರಿತ್ರೆಯ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸುವುದು, ವೀರಶೈವ ಲಿಂಗಾಯತ ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಮಾಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ, ಮುಖಂಡರಾದ ಕೈಲಾಸ ಕಲಬುರಗಿ, ವೀರೇಶ ದೇಸಾಯಿ, ಜಗದೀಶ ಸಜ್ಜನ್ ಕಲ್ಲೂರ, ವೀರಣ್ಣ ಗಂಗಾಣಿ, ರೇವಣಸಿದ್ದಪ್ಪ ದಾದಾಪೂರ, ಚಂದ್ರಶೇಖರ್ ಪಾರ, ವಿಜಯಕುಮಾರ ಬಳಕೇರಿ, ಶಿವಶರಣಪ್ಪ ಡೇಂಗಿ, ರವೀಂದ್ರ ಬಂಡೆಪ್ಪನೂರ, ದಯಾನಂದ ಹಿತ್ತಲ, ಶಿವಕುಮಾರ ಪವಡಶೆಟ್ಟಿ ಕೊಳ್ಳೂರು, ನಾಗರಾಜ ಸೀಳಿನ, ಸುರೇಶ್ ಸುಂಕದ, ಸುನೀಲ ನಿಡಗುಂದ, ವಿವೇಕ ಪಾಟೀಲ ದೇಗಲಮಡಿ ಹಾಗೂ ಪವನ ಪಾಟೀಲ ದೇಗಲಮಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















