
ಬಿ ಜೆ ಪಿ-ಜೆ ಡಿ ಎಸ್ ನ ಮೈತ್ರಿ ಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಪರ ಇಂದು ಬೆಳಿಗ್ಗೆಯಿಂದಲೂ ಸಹ ಹಲವಾರು ಶಿಕ್ಷಕ-ಶಿಕ್ಷಕಿಯರು ಸ್ವಯಂ ಪ್ರೇರಿತರಾಗಿ ಈ ಬಾರಿಯ ಬೆಂಗಳೂರು ಶಿಕ್ಷಕರ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಹಾಗೂ ಕುಮಾರಣ್ಣ-ಮೋದಿಯವರ ಕೈ ಬಲಪಡಿಸಬೇಕು ಎಂಬ ದಿಟ್ಟ ನಿರ್ಧಾರದಿಂದ ನಂದಿನಿ ರಂಗನಾಥ ರವರ ಜೊತೆ ನೂರಾರು ಶಿಕ್ಷಕರು ಸೇರಿ ಶಾಲೆಗಳಿಗೆ ಬೇಟಿ ನೀಡಿ ಬಿ ಜೆ ಪಿ-ಜೆ ಡಿ ಎಸ್ ಮಾಡಿರುವಂತ ಯೋಜನೆಗಳನ್ನು ತಿಳಿಸುತ್ತಾ ಈ ಬಾರಿ ಎ.ಪಿ.ರಂಗನಾಥರವರನ್ನು ಗಿಲ್ಲಿಸಲೇಬೇಕು ಎಂದು ತೀರ್ಮಾನಿಸಿದ್ದಾರೆ.ಈ ಸಂದರ್ಭದಲ್ಲಿ ಹರ್ಷ ಸಮೂಹ ಶಾಲೆಯ ಶಿಕ್ಷಕರು,ವಿಶಾಲ್ ಸ್ಕೂಲ್ ನ ಟಿ.ಕೆ.ನರಸೇಗೌಡ ಹಾಗು ಶಿಕ್ಷಕರು,ಹರ್ಷ ಸಂಸ್ಥೆಯ ಪ್ರಿನ್ಸಿಪಾಲರು,ಮುಖಂಡರು,ಕಾರ್ಯಕರ್ತರು ಸೇರಿ ನಂದಿನಿ.ಹೆಚ್.ಜಿ.ರವರಿಗೆ ಸ್ಫೂರ್ತಿ ತುಂಬಿದರು.






















