
ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.14- ಕನ್ನಡಿಗರ ಸ್ವಾಭಿಮಾನ, ಧೈರ್ಯ, ತ್ಯಾಗ ಮತ್ತು ಅಪ್ರತಿಮ ವೀರತ್ವದ ಸಂಕೇತ ಚಿತ್ರದುರ್ಗದ ಮದಕರಿ ನಾಯಕರು. ಧರ್ಮಕ್ಕಾಗಿ ಮತ್ತು ನಾಡಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಶ್ರೇಷ್ಠ ಅಮರತ್ವ ಸ್ಥಾನ ಪಡೆದಿರುವ ವೀರಮದಕರಿ ಅವರನ್ನು ಗೌರವಿಸುವುದು , ಪ್ರತಿಯೊಬ್ಬರ ಕರ್ತವ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಚಿತ್ರದುರ್ಗದ ವೀರ ರಾಜ ಮದಕರಿ ನಾಯಕ ಕೊಡುಗೆಗಳ ಕುರಿತು ಮಾತನಾಡುತ್ತ ಮದಕರಿ ನಾಯಕರು ಚಿತ್ರದುರ್ಗದ ಅಪ್ರತಿಮ ರಾಜರು. ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರಾಲಿ ವಾಮ ಮಾರ್ಗದ ಮೂಲಕ ವಶಪಡಿಸಿಕೊಂಡು ಮದಕರಿನಾಯಕರನ್ನು ಬಂಧಿಸಿ ಅನ್ನದಲ್ಲಿ ವಿಷ ಹಾಕಿ ಕೊಂದ ಘಟನೆ ಕನ್ನಡಿಗರು ಎಂದು ಮರೆಯಲಾರರು. ಚಿತ್ರದುರ್ಗದ ವಿಶೇಷ, ಮದಕರಿನಾಯಕರ ಇತಿಹಾಸ ಮತ್ತು ಒನಕೆ ಓಬವ್ವರ ಕುರಿತು ತ.ರಾ. ಸುಬ್ಬರಾಯರು ತಮ್ಮ ದುರ್ಗಾಸ್ತಮಾನ ಕಾದಂಬರಿಯಲ್ಲಿ ವರ್ಣಿಸಿ ಪುಟ್ಟಣ್ಣ ಕಣಗಾಲ್ ರವರು ನಾಗರಹಾವು ಚಿತ್ರದಲ್ಲಿ ವಿಶೇಷವಾಗಿ ಗೀತೆಯನ್ನು ರಚಿಸಿ ಕನ್ನಡಿಗರಿಗೆ ನೀಡಿದ್ದಾರೆ. ವೀರಮದಕರಿ ನಾಯಕರು ಇತಿಹಾಸ, ಸ್ವಾಭಿಮಾನ, ಧೈರ್ಯ, ಸಾಹಸ ಮತ್ತು ಧರ್ಮಕ್ಕಾಗಿ ತಮ್ಮ ಉಸಿರನ್ನು ಸಮರ್ಪಿಸಿದ ವೀರಮದಕರಿ ನಾಯಕರನ್ನು ಪ್ರತಿಯೊಬ್ಬರು ನೆನಪಿಸಿಕೊಂಡು ದೇಶಪ್ರೇಮಿಗಳಾಗಬೇಕು ಎಂದು ತಿಳಿಸಿದರು.
ಮುಖಂಡ ಹಾಗೂ ಜನಪದ ಗಾಯಕ ಸುರೇಶ್ ನಾಗ್ ಹರದನಹಳ್ಳಿ ರವರು ರಾಜವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿ, ಮದಕರಿ ನಾಯಕರು ಕನ್ನಡ ನಾಡಿನ ಹೆಮ್ಮೆಯ ನಾಯಕರು. ತನ್ನ ರಾಜ್ಯ ರಕ್ಷಣೆ, ಜನರ ಸಂರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಜೀವವನ್ನು ಸಮರ್ಥಿಸಿದ ಇತಿಹಾಸದ ಶ್ರೇಷ್ಠ ವ್ಯಕ್ತಿ ವೀರಮದಕರಿ ನಾಯಕರು. ಕನ್ನಡ ಸಾಹಿತ್ಯ ಪರಿಷತ್ತು ಮದಕರಿನಾಯಕರ ಜಯಂತಿ ಮತ್ತು ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಂದು ಕಾರ್ಯಕ್ರಮವನ್ನು ಸರಳವಾಗಿ ಅಚ್ಚುಕಟ್ಟಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸಿಕೊಳ್ಳುತ್ತಿರುವ ನಮ್ಮೆಲ್ಲರಿಗೂ ಮಾದರಿಯಾಗಿರುವ ಅಧ್ಯಕ್ಷ ಸುರೇಶ್ಋಗ್ವೇದಿ ಅವರಿಗೆ ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಗಾಯಕ ಸುರೇಶ್ನಾಗ್ ಹರದನಹಳ್ಳಿಯವರು ವೀರಮದಕರಿನಾಯಕರ ಇತಿಹಾಸ ಮತ್ತು ಚಿತ್ರದುರ್ಗದ ಕೋಟೆಯ ವಿಶೇಷ ಗೀತೆಗಳನ್ನು ಹಾಡಿ ಸಭಿಕರಿಗೆ ದೇಶಪ್ರೇಮದ ವಿಚಾರಗಳನ್ನು ತುಂಬಿ ಸಂತೋಷಗೊಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಜನಪದ ಗಾಯಕ ರವಿಚಂದ್ರ ಪ್ರಸಾದ್ ರವರು ಮದಕರಿ ನಾಯಕರು ಜೀವನ ಇತಿಹಾಸವನ್ನು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ನಾಡು ನುಡಿ ಜಲ ಭಾμÉಗೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಕನ್ನಡಿಗರು ಸಂತೋಷ ಪಡಬೇಕೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿಕೆ ಆರಾಧ್ಯ, ಶಿವಲಿಂಗಮೂರ್ತಿ, ಶಿಕ್ಷಕಿ ಸರಸ್ವತಿ ಪದ್ಮಾಪುರುμÉೂೀತ್ತಮ್, ಶಿಕ್ಷಕಿ ಮಾಲಿನಿ, ಆಲೂರು ರಮೇಶ್ ಜೈ ರಾಮ್, ಸುರೇಶ್ ದೊಡ್ಡ ಮೋಳೆ, ಇದ್ದರು.
ಕನ್ನಡ ನಾಡು ನುಡಿ ಜಲ ಭಾμÉ ಮತ್ತು ಕನ್ನಡ ಚಲನಚಿತ್ರದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

























