Home ಸುದ್ದಿ ರಾಷ್ಟ್ರೀಯ ಮತ್ತೆ ಒಂದಾದ ಕ್ರಿಕೆಟಿಗ ಪ್ರಥ್ವಿ ಆಕೃತಿ ಅಗರ್ವಾಲ್

ಮತ್ತೆ ಒಂದಾದ ಕ್ರಿಕೆಟಿಗ ಪ್ರಥ್ವಿ ಆಕೃತಿ ಅಗರ್ವಾಲ್

ಮುಂಬೈ, ಅ. 13-ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಪ್ರಥ್ವಿ ಶಾ ಮತ್ತು ಅವರ ನಿಶ್ಚಿತಾರ್ಥದ ಜೋಡಿ ಆಕೃತಿ ಅಗರ್ವಾಲ್ ಅವರ ಸಂಬಂಧದಲ್ಲಿ ಮತ್ತೊಮ್ಮೆ ಹೊಸತನ ಮೂಡಿದ್ದು, ನಿಶ್ಚಿತಾರ್ಥ ಮುರಿದುಕೊಂಡ ಕೇವಲ 26 ದಿನಗಳ ಬಳಿಕ ಈ ಜೋಡಿಯು ಮತ್ತೆ ಹೊಸ ಜೀವನ ಆರಂಭಿಸಲು ನಿರ್ಧರಿಸಿದೆ. ಆಕೃತಿ ಅಗರ್ವಾಲ್ ಒಬ್ಬ ನಟಿ ಮತ್ತು ಮಾಡೆಲ್ ಆಗಿದ್ದು, ಇವರು ಮತ್ತು ಪ್ರಥ್ವಿ ಶಾ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೆಲವು ಸಮಯದ ಹಿಂದೆ ಅವರ ಸಂಬಂಧದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 17ರಂದು ಆಕೃತಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಹಂಚಿಕೊಳ್ಳುವ ಮೂಲಕ ತಾವು ಪರಸ್ಪರ ಒಪ್ಪಿಗೆಯಿಂದ ನಿಶ್ಚಿತಾರ್ಥ ಮುರಿದುಕೊಂಡು ಬೇರ್ಪಟ್ಟಿರುವುದಾಗಿ ಘೋಷಿಸಿದ್ದರು.


ಆದರೆ ಈ ಘಟನೆ ನಡೆದ ಕೇವಲ 26 ದಿನಗಳೊಳಗೆ ಈ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪೆÇೀಸ್ಟ್ ಹಂಚಿಕೊಳ್ಳುವ ಮೂಲಕ ತಾವು ಮತ್ತೆ ಒಂದಾಗುತ್ತಿರುವುದಾಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆಕೃತಿ ಅಗರ್ವಾಲ್ ತಮ್ಮ ಹೊಸ ಇನ್‍ಸ್ಟಾಗ್ರಾಮ್ ಪೆÇೀಸ್ಟ್‍ನಲ್ಲಿ ಸ್ಪಷ್ಟಪಡಿಸಿರುವಂತೆ, ಈ ಹಿಂದೆ ತೆಗೆದುಕೊಂಡ ನಿರ್ಧಾರದ ಹಿಂದೆ ಹೊರಗಿನವರ ಮತ್ತು ಆಪ್ತರ ಸಲಹೆಗಳ ಪ್ರಭಾವವಿತ್ತು, ಇದು ಅವರ ಮನಸ್ಸಿನಲ್ಲಿ ತಪ್ಪು ತಿಳುವಳಿಕೆಯನ್ನು ಮೂಡಿಸಿತ್ತು. ತಮ್ಮ ಈ ನಿರ್ಧಾರಕ್ಕೂ ಮತ್ತು ಅದರಿಂದ ಉಂಟಾದ ನೋವಿಗೂ ತಾವೇ ಸಂಪೂರ್ಣ ಜವಾಬ್ದಾರರಾಗಿರುವುದಾಗಿ ತಿಳಿಸಿರುವ ಆಕೃತಿ, ಇಬ್ಬರೂ ಮುಕ್ತವಾಗಿ ಚರ್ಚಿಸಿ ಎಲ್ಲಾ ತಪ್ಪು ತಿಳುವಳಿಕೆಗಳನ್ನು ದೂರ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಇನ್ನುಮುಂದೆ ಹೊರಗಿನವರ ಯಾವುದೇ ಹಸ್ತಕ್ಷೇಪವಿರಬಾರದು ಮತ್ತು ತಮ್ಮ ಭವಿಷ್ಯವು ಕೇವಲ ಪರಸ್ಪರ ಪ್ರೀತಿ, ನಂಬಿಕೆ ಹಾಗೂ ತಿಳುವಳಿಕೆಯ ಮೇರೆಗೆ ಇರಬೇಕು ಎಂದು ಸ್ಪಷ್ಟಪಡಿಸಿರುವ ಈ ಜೋಡಿ, ಮತ್ತೊಮ್ಮೆ ಒಂದಾಗುವ ನಿರ್ಧಾರ ಕೈಗೊಂಡಿದೆ. ಪ್ರಥ್ವಿ ಶಾ ಕೂಡ ಆಕೃತಿ ಅವರ ಈ ಪೆÇೀಸ್ಟನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಈ ಹೊಸ ಪಯಣಕ್ಕೆ ಮುದ್ರೆ ಒತ್ತಿದ್ದು, ಅಭಿಮಾನಿಗಳು ಹಾಗೂ ಉಭಯ ಕುಟುಂಬಗಳು ತಮ್ಮ ಈ ನಿರ್ಧಾರವನ್ನು ಗೌರವಿಸಲಿವೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.