Home ಜಿಲ್ಲೆ ಗುಡೇಕೋಟೆ ಪಕೃದ್ದಿನ್ ಗೆ ಪಿಹೆಚ್ ಡಿ ಗೌರವ.

ಗುಡೇಕೋಟೆ ಪಕೃದ್ದಿನ್ ಗೆ ಪಿಹೆಚ್ ಡಿ ಗೌರವ.

ಸಂಜೆವಾಣಿ ವಾರ್ತೆ

ಕೂಡ್ಲಿಗಿ. ಸೆ. 28 :- ತಾಲೂಕಿನ ಗುಡೇಕೋಟೆ ಗ್ರಾಮದ ಗ್ರಾಮೀಣ ಪ್ರತಿಭೆ ಡಾ. ಬಿ ಪಕೃದ್ದಿನ್ ಇವರು ಮಂಡಿಸಿದ ಸಂಶೋಧನಾ ಗ್ರಂಥಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಯ 26ನೇ ವಾರ್ಷಿಕ ಘಟಿಕೋತ್ಸವ – ಭಾಗ 1ರಲ್ಲಿ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

 ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆ ಗ್ರಾಮದ ನಬಿ ಸಾಬ್ ಅವರ ಪುತ್ರ ಡಾ. ಪಕ್ರುದ್ದೀನ್. ಬಿ ಅವರು ಗ್ರಾಮದ  ಕನ್ನಡ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ತಮ್ಮ ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಹಾಗೂ ಸಾಧನೆಯ ಮೂಲಕ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರಿನಲ್ಲಿ, ಡಾ. ಹೇಮಾವತಿ ಆರ್. ಅವರ ಮಾರ್ಗದರ್ಶನದಲ್ಲಿ.”An Effective Approach for Pomegranate Fruit Disease Detection and Classification using Deep Learning Models” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಡಾ. ಪಕ್ರುದ್ದೀನ್. ಬಿ ಅವರು ಕಳೆದ 17 ವರ್ಷಗಳಿಂದ ಬೋಧನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಬೆಂಗಳೂರಿನ ಪ್ರೆಸಿಡೆಂನ್ಸಿ ಯೂನಿವರ್ಸಿಟಿ ಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.