ಕಲಬುರಗಿ: ಅವೈಜ್ಞಾನಿಕ ಬರ ಪರಿಹಾರ ಘೋಷಣೆ ಖಂಡಿಸಿ, ರೈತರ ಸಾಲಮನ್ನಾ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಶರಣಬಸಪ್ಪ ಮಮಶೆಟ್ಟಿ,ಕರೆಪ್ಪ ಕರಗೊಂಡ,ಭೀಮಶಾ ಬಡದಾಳ,ದೇವಿಂದ್ರಪ್ಪ ಪಾಟೀಲ,ಚಂದಪ್ಪ ಪೂಜಾರಿ,ಸಾಯಬಣ್ಣ ಕೊರಬಾ,ಗೋವಿಂದ ರಾಠೋಡ,ಶರಣಬಸಪ್ಪ ಪೂಜಾರಿ ಸೇರಿದಂತೆ ಹಲವರು ಪಾಲ್ಗೊಂಡರು.