
ಕಲಬುರಗಿ: ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬಸವಾದಿ ಶಿವಶರಣರ ಹಿಂದೂ ಸಮಾವೇಶವನ್ನು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಉದ್ಘಾಟಿಸಿದರು.ಡಾ.ಶಿವಕುಮಾರ ಸ್ವಾಮೀಜಿ,ಹವಾಮಲ್ಲಿನಾಥ ಮಹಾರಾಜರು,ಪ್ರಣವಾನಂದ ಸ್ವಾಮೀಜಿ,ಪರಮಾನಂದ ಸ್ವಾಮೀಜಿ,ವೀರಭದ್ರ ಶಿವಾಚಾರ್ಯರು,ಡಾ.ಅಪ್ಪಾರಾವ ದೇವಿ ಮುತ್ತ್ಯಾ,ಮಲ್ಲಣ್ಣಪ್ಪ ಮುತ್ತ್ಯಾ,ಸಿದ್ಧವೀರ ಶಿವಾಚಾರ್ಯರು,ಸವಿತಾನಂದನಾಥ ಸ್ವಾಮೀಜಿ,ಬಳಿರಾಮ ಮಹಾರಾಜ ಅವರು ಸೇರಿದಂತೆ ವಿವಿಧ ಮಠಾಧೀಶರು,ಸಮಾವೇಶದ ಕಾರ್ಯಾಧ್ಯಕ್ಷ ಚಂದು ಪಾಟೀಲ,ಡಾ.ಉಮೇಶ ಜಾಧವ, ಡಾ. ಬಿ.ಜಿ ಪಾಟೀಲ, ಶಶೀಲ ನಮೋಶಿ,ದತ್ತಾತ್ರೇಯ ಪಾಟೀಲ ರೇವೂರ,ರಾಜಕುಮಾರ ಪಾಟೀಲ ತೇಲ್ಕೂರ,ಬಸವರಾಜ ಮತ್ತಿಮೂಡ ಅವರು ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಸಹಸ್ರಾರು ಸಮಾಜ ಬಾಂಧವರು ಪಾಲ್ಗೊಂಡರು.





















