Home ಜಿಲ್ಲೆ ಕಲಬುರಗಿ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ದಾರುಲ್ ಉಲೂಮ್ ದೀನಿಯಾ ಬಂದಾನವಾಜಿಯಾ ವಾರ್ಷಿಕ ಜಲ್ಸಾ ಸಮಾವೇಶ

ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ದಾರುಲ್ ಉಲೂಮ್ ದೀನಿಯಾ ಬಂದಾನವಾಜಿಯಾ ವಾರ್ಷಿಕ ಜಲ್ಸಾ ಸಮಾವೇಶ

ಕಲಬುರಗಿ: ಇಲ್ಲಿನ ಖಾಜಾ ಬಂದಾ ನವಾಜ (ಕೆಬಿಎನ್) ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ರವಿವಾರ ಆಯೋಜಿಸಿದ್ದ ದಾರುಲ್ ಉಲೂಮ್ ದೀನಿಯಾ ಬಂದನವಾಜಿಯಾ ಸಂಸ್ಥೆಯ ವಾರ್ಷಿಕ ಜಲ್ಸಾ ಸಮಾವೇಶ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಹಿಫ್ಜ್-ಎ-ಖುರಾನ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ದಸ್ತಾರ್ ಬಂದಿ ಹಾಗೂ ರಿದಾ ಪೆÇೀಶಿ ನೆರವೇರಿಸಿ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರ್ಗಾ ಹಜರತ್ ಖ್ವಾಜಾ ಬಂದನವಾಜ್ (ರ.ಅ.) ಸಜ್ಜಾದಾ ನಶೀನ್, ಖಾಜಾ ಎಜುಕೇಶನ್ ಸೊಸೈಟಿಯ ಪ್ರೆಸಿಡೆಂಟ್, ಖ್ವಾಜಾ ಬಂದನವಾಜ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾದ ಹಜರತ್ ಡಾ. ಹಾಫಿಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಹೇಬ್ ವಹಿಸಿದ್ದರು.

ಜಾಮಿಯಾ ನಿಜಾಮಿಯಾ, ಹೈದರಾಬಾದ್‍ನ ಉಪಕುಲಪತಿ ಹಜರತ್ ಮೌಲಾನಾ ಮುಫ್ತಿ ಖಲೀಲ್ ಅಹ್ಮದ್ ಸಾಹೇಬ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು