ಕಲಬುರಗಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್‍ಐಆರ್ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿ ಮತ್ತು ಅವರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಪಕ್ಷದ ಜಿಲ್ಲಾ ಅಧ್ಯಕ್ಷ ಡಾ.ಕಿರಣ್ ದೇಶಮುಖ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಭೀಮರಾವ ಟಿ.ಟಿ., ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಮುಖಂಡರಾದ ಶಕೀಲ್ ಸರಡಗಿ, ಈರಣ್ಣ ಝಳಕಿ, ಶಿವಾನಂದ ಹೊನಗುಂಟಿ, ರಾಜೀವ್ ಜಾನೆ, ಫಾರುಕ್ ಮಾನಿಯಾಲ್, ಅಶೋಕ ಟಿ.ವೀರನಾಯಕ್, ಆಸೀಫ್ ಗಾಣಗಾಪೂರಿ, ಮೋದಿನ್ ಪಟೇಲ್ ಅಣಬಿ, ಅಭಿಷೇಕ ಅಲ್ಲಮಪ್ರಭು, ನಂದಕುಮಾರ ಮಾಲಿಪಾಟೀಲ, ದಿನೇಶ ದೊಡ್ಡಮನಿ, ಚಂದ್ರಕಾ ಪರಮೇಶ್ವರ, ವಾಣಿಶ್ರೀ ಸಗರಕರ್, ಸವಿತಾ ಹಣಮಂತ ಒಂಟಿ, ರೇಣುಕಾ ಸಿಂಗೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.