
ಕಲಬುರಗಿ,ಸೆ.28-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಖನಿ ಹತ್ತಿರವಿರುವ ಹನುಮಾನ ಗುಡಿ ಕಟ್ಟೆಯ ಮೇಲೆ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫರಹತಾಬಾದ ಪೊಲೀಸ್ ಠಾಣೆ ಪಿಐ ಹುಸೇನ್ ಭಾಷಾ, ಸಿಬ್ಬಂದಿಗಳಾದ ಕೇಶುರಾಯ, ಮಹಿಬೂಬ್, ಕಲ್ಯಾಣಕುಮಾರ, ತಿರುಪತಿ, ಆನಂದ, ಎಂ.ಆರ್.ಪಟೇಲ್ ಅವರು ದಾಳಿ ನಡೆಸಿ 13 ಜನ ಜೂಜುಕೋರರನ್ನು ಬಂಧಿಸಿದ್ದಾರೆ.
ಶಕೀಲ್ ಅಯುಬ್ ಪಟೇಲ್, ತೋಹೀದ್ ಅಬ್ದುಲ್ ಹಮ್ಮಿದ್, ಅದ್ನಾನ್ ಪಟೇಲ್, ಮಿರಾಜ್ ಪಟೇಲ್, ತೌಸೀಫ್ ಪಟೇಲ್, ನಜೀರುದ್ದೀನ್, ಸಮೀರ್, ಜಿಬ್ರಾಹಿಲ್, ಚಂದ್ರಕಾಂತ ಗೊಬ್ಬರಡಗಿ, ಸಮೀರ್, ರಾಜು ಮಡಿವಾಳ, ಅಬ್ದುಲ್ ರಹೀಮ್ ಮತ್ತು ವಿಶ್ವಲಿಂಗ ಸಣಬೊ ಎಂಬುವವರನ್ನು ಬಂಧಿಸಿ 21390 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















