Home ಜಿಲ್ಲೆ ಕಲಬುರಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪಾಲಕರು ಪೋಷಕರು ಶಿಕ್ಷಕರು ಶ್ರಮಿಸಬೇಕು: ಡಾ.ದಶರಥ ಮೇತ್ರಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪಾಲಕರು ಪೋಷಕರು ಶಿಕ್ಷಕರು ಶ್ರಮಿಸಬೇಕು: ಡಾ.ದಶರಥ ಮೇತ್ರಿ

ಕಲಬುರಗಿ,ಸೆ.28-ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪಾಲಕ ಪೆÇೀಷಕರು ಹಾಗೂ ಹಾಗೂ ಶಿಕ್ಷಕರು ಶ್ರಮಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೆಂದು ವಾಣಿಜ್ಯ ವಿಭಾಗದ ಪ್ರಾಂಶುಪಾಲರಾದ ಡಾ. ದಶರಥ ಮೇತ್ರಿ ಅವರು ಅಭಿಪ್ರಾಯ ಪಟ್ಟರು.
ನಗರದ ಎಸ್.ಬಿ.ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಾಲಕರು, ಪೋಷಕರು ಹಾಗೂ ಶಿಕ್ಷಕರ ಸಭೆಯನ್ನು ಶರಣಬಸವೇಶ್ವರ ಅಪ್ಪ ಅವರ ಭಾವಚಿತ್ರಕ್ಕೆ ಪೂಜಿಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ನಿಮಗೆ ಹೇಳಲಿಕ್ಕೆ ಬಯಸ್ತಾ ಇದ್ದೇನೆ. ಅನೇಕ ಪಾಲಕರು ತಮ್ಮ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಹೇಳ್ತಾ ಇದ್ದರು. ಅದರಲ್ಲಿ ಒಂದೆರಡು ಪ್ರಮುಖ ವಿಷಯಗಳನ್ನು ನಾನು ಒಮ್ಮೆ ತಮ್ಮಂದಿಗೆ ವ್ಯಕ್ತಪಡಿಸಲಿಕ್ಕೆ ಬಯಸ್ತಾ ಇದ್ದೇನೆ. ಪ್ರಮುಖವಾಗಿ ನಾವು ಈ ಅಕಾಡೆಮಿಕ್ ರೆಗ್ಯುಲಾರಿಟಿಗೆ ಬಹಳಷ್ಟು ಒತ್ತನ್ನು ನೀಡ್ತಾ ಇದ್ದೇವೆ. ಮತ್ತೆ ವಿದ್ಯಾರ್ಥಿಗಳು ದಿನಾಲೂ ಸಹ ಕಾಲೇಜಿಗೆ ಆಗಮಿಸಿ ಎಲ್ಲಾ ತರಗತಿಗಳನ್ನು ಕಡ್ಡಾಯವಾಗಿ ಅವರು ಹಾಜರಾಗಬೇಕು ಎಂದರು.
ಹಾಜರಾತಿ ಮಾನದಂಡ: ವಿಶ್ವವಿದ್ಯಾಲಯದ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಕನಿಷ್ಠ 75% ಹಾಜರಾತಿಯನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು.
ಹಾಜರಾತಿಯ ಕೊರತೆ ಮತ್ತು ಪರಿಣಾಮ: ಹಾಜರಾತಿ 75% ಗಿಂತ ಕಡಿಮೆಯಿದ್ದು, ಅದನ್ನು UಂಒS ಪೆÇೀರ್ಟಲ್‍ನಲ್ಲಿ ನಮೂದಿಸಿದರೆ, ವಿದ್ಯಾರ್ಥಿಗೆ ಪರೀಕ್ಷೆಯ ‘ಹಾಲ್ ಟಿಕೆಟ್’ (ಊಚಿಟಟ ಖಿiಛಿಞeಣ) ಜನರೇಟ್ ಆಗುವುದಿಲ್ಲ ಹಾಗೂ ಅವರು ಪರೀಕ್ಷೆ ಬರೆಯಲು ಅನರ್ಹರಾಗುತ್ತಾರೆ.
ತೊಂದರೆ ನೀಡಲು ಅಲ್ಲ; ಬದಲಾಗಿ ದಂಡದ ಹೆದರಿಕೆಯಿಂದಾದರೂ ವಿದ್ಯಾರ್ಥಿಗಳು ನಿಯಮಿತವಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲಿ ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ.
ಪೆÇೀಷಕರಿಗೆ ಮನವಿ: ಪೆÇೀಷಕರು ತಮ್ಮ ಮಕ್ಕಳಿಗೆ ಪ್ರತಿದಿನ ತರಗತಿಗಳಿಗೆ ಹಾಜರಾಗಿ ಕನಿಷ್ಠ 75% ಹಾಜರಾತಿ ಕಾಯ್ದುಕೊಳ್ಳುವಂತೆ ತಿಳಿಸಬೇಕು ಎಂದರು.
ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಂದೆ ತಾಯಿಗಳು ಮಕ್ಕಳ ಬಗ್ಗೆ ನಿಗಾ ವಹಿಸಬೇಕು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೆÇೀನ್ ಬಳಕೆಯಾಗುತ್ತಿರುವುದು ತಡೆಹಿಡಿಯಬೇಕು ಮಕ್ಕಳೊಂದಿಗೆ ಪ್ರತಿದಿನ ಮಕ್ಕಳ ಹಾಜರಾತಿಯನ್ನು ಕಡ್ಡಾಯ ಪಡಿಸಬೇಕು ಟೆಸ್ಟ್ನಲ್ಲಿ ಬರೆದಂತಹ ಮಕ್ಕಳಿಗೆ ಇಂಟರ್ನಲ್ ಮಾಕ್ರ್ಸ್ ಹೆಚ್ಚಿಗೆ ನೀಡಲು ಪ್ರಯತ್ನಿಸಬೇಕು ಎಂದು ಪೆÇೀಷಕರು ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿ ಡಾ. ದಯಾನಂದ ಎಸ್ ಹೊಡಲ ಅವರು ಮಾತನಾಡಿ,ನಮ್ಮ ವಾಣಿಜ್ಯ ವಿಭಾಗ ಸ್ಥಾಪನೆಯಾಗಿದ್ದು, 1961 ರಲ್ಲಿ ಇಲ್ಲಿಯವರೆಗೆ 66ನೇ ವರ್ಷ ಕಾಲಿಡುತ್ತಿದ್ದೇವೆ ಇದು ನನಗೆ ಸುಧೀರ್ಘ ಸೇವೆಯಾಗಿದೆ ನೆರೆ ರಾಜ್ಯದ ಗ್ರಾಮೀಣದಿಂದ ಬರುವ ವಿದ್ಯಾರ್ಥಿಗಳು ಒಂದು ರೀತಿಯ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಣ ಸಂಸ್ಥೆಗಳ ಶರಣ ಬಸವೇಶ್ವರ ಮಹಾವಿದ್ಯಾಲಯ ಒಂದಾಗಿದೆ ಎಂದು ತಿಳಿಸಿದರು.
ಇಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳು ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೆ ಬ್ಯಾಂಕಿಂಗ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ ಕಂದಾಯ, ಕಮರ್ಷಿಯಲ್ ಟೆಕ್ಸ್, ಎಕ್ಸಸೈಜ್, ಜಿಲ್ಲಾ ಪಂಚಾಯತ್, ಪೆÇಲೀಸ್ ಇಲಾಖೆ ಸೇರಿದಂತೆ ಎಂಎಲ್‍ಎ, ಎಂ.ಪಿ ರಾಜಕಾರಣಿಗಳಾಗಿದ್ದಾರೆ ಎಂದು ಅವರು ತಿಳಿಸಿದರು.
ಈ ಭಾಗದಲ್ಲಿ 400 ಡಿಗ್ರಿ ಕಾಲೇಜುಗಳಾಗಿವೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಮ್ಮ ಶರಣಬಸವೇಶ್ವರ ವಾಣಿಜ್ಯದ ವಿಭಾಗ ಅಧೀನದಲ್ಲಿ ಇದೆ.
ಕಲ್ಯಾಣ ಕರ್ನಾಟಕ ವಿಭಾಗದಿಂದ ಅನೇಕರು ವಿದ್ಯಾವಂತರಾಗಿದ್ದಾರೆ ರಾಜ್ಯಗಳಲ್ಲಿ ಕೆಲಸ ಮಾಡುತ್ತ ಇದ್ದಾರೆ ಇಲ್ಲಿ ಸಹ ನೂರಕ್ಕೂ ಹೆಚ್ಚು ಜನ ಸರಕಾರಿ ಅರೆ ಸರಕಾರಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು
ನಮ್ಮ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಇದ್ದೇವೆ ಎಂದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯನೌಕರ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ರಾಜರತ್ನ ಡಿ ಕೆ ಅವರು ಮಾತನಾಡಿ, ಪೆÇೀಷಕರು ಹಾಗೂ ಶಿಕ್ಷಕರ ಸಭೆ ಆಯೋಜನೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಶರಣಬಸವೇಶ್ವರ ಕಾಲೇಜಿನ ಪದವಿ ವಾಣಿಜ್ಯ ವಿಭಾಗದಲ್ಲಿ ಒಳ್ಳೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನೀಡುತ್ತಿದ್ದಾರೆ. ಈಗಾಗಲೇ ಉಪನ್ಯಾಸಕರು ಮಕ್ಕಳು ಬರೆದ ಅಂಕಗಳನ್ನು ತೋರಿಸಿದ್ದಾರೆ ಇನ್ನು ಮಕ್ಕಳಿಗೆ ಯಾವ ರೀತಿ ತಿದ್ದುಪಡಿ ಮಾಡಬೇಕೆಂದು ನನ್ನ ಮಗನು ಇದೇ ಶಾಲೆಯಲ್ಲಿ ಬಿ.ಕಾಂ.5ಣh ಸೆಮಿಸ್ಟರ್ ಓದುತ್ತಾ ಇದ್ದಾನೆ. ಫಲಿತಾಂಶ ಹಾಗೂ ಅವನ ಹಾಜರಾತಿ ನೋಡಿ ನನಗೆ ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಪಾಲಕ ಪೆÇೀಷಕರು ಉಪನ್ಯಾಸಕರೊಂದಿಗೆ ಸಂವಾದ ಮಾಡಿದರು. ತಂದೆ ತಾಯಿಗಳು ಮಕ್ಕಳ ಬಗ್ಗೆ ನಿಗಾವಹಿಸಬೇಕು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೆÇೀನ್ ಬಳಕೆಯಾಗುತ್ತಿರುವುದು ತಡೆಹಿಡಿಯಬೇಕು ಮಕ್ಕಳೊಂದಿಗೆ ಪ್ರತಿದಿನ ಅಭ್ಯಾಸ ಮಾಡಲು ಹಾಗೂ ಮಕ್ಕಳಿಗೆ ಉಪನ್ಯಾಸಕರು ಪ್ರತಿದಿನ ಮಕ್ಕಳ ಹಾಜರಾತಿಯನ್ನು ಕಡ್ಡಾಯ ಪಡಿಸಬೇಕು ಟೆಸ್ಟ್ನಲ್ಲಿ ಬರೆದಂತ ಮಕ್ಕಳಿಗೆ ಇಂಟರ್ನಲ್ ಮಾಕ್ರ್ಸ್ ಹೆಚ್ಚಿಗೆ ನೀಡಲು ಪ್ರಯತ್ನಿಸಬೇಕು ಎಂದು ಪೆÇೀಷಕರು ಒತ್ತಾಯಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪಾಲಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು
ಇದೇ ಸಂದರ್ಭದಲ್ಲಿ ಸುನಂದಾ ವಾಂಜರ್ ಕೇಡ್ , ವಿ.ಕೆ ಬಂಡಿಗರ್ ಪೆÇ್ರಫೆಸರ್ ಸಿದ್ದಮ್ಮ ಪಾಟೀಲ್ ಮತ್ತು ಪಾಲಕ ಪೆÇೀಷಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.