Home ಜಿಲ್ಲೆ ಗಾಂಧಿನಗರ ಪೊಲೀಸರಿಂದ ಕಳ್ಳರ ಬಂಧನ  6ಲಕ್ಷ ರೂ ವಶ

ಗಾಂಧಿನಗರ ಪೊಲೀಸರಿಂದ ಕಳ್ಳರ ಬಂಧನ  6ಲಕ್ಷ ರೂ ವಶ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಸೆ,4-  ಕಳೆದ ಮಾರ್ಚ್ ನಲ್ಲಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣದಲ್ಲಿ 6 ಲಕ್ಷ ರೂ ನಗದು ವಶಪಡಿಸಿಕೊಂಡು ಇಬ್ವರು ಆರೋಪಿಗಳನ್ನು ಬಂಧಿಸಲಾಗಿದೆ. 

 ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವಿಂಚಂದ್ರ, ಡಿ.ಬಿ, ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ (ತನಿಖೆ) .ಕೆ.ವಿರುಪಾಕ್ಷಪ್ಪ.ಕೆ ನೇತೃತ್ವದಲ್ಲಿ  ಆರೋಪಿಗಳಾದ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ

ಕಪ್ಪರಾಳ ತಿಪ್ಪ ಗ್ರಾಮ ಬೋಗುಲು ಮಂಡಲಂದ ಪ್ರಸಂಗಿ ಎಲಿಯಾ ಚೆಲ್ಲಾ ಅಲಿಯಾಸ್ ಚೆಲ್ಲಾ  (33) ಗೋಗುಲ ಮಾಧವರಾವ್  (49) ಬಂಧಿಸಲಾಗಿದೆ

ಈ ಕಾರ್ಯಾಚರಣೆಯಲ್ಲಿ ಎಎಸ್ ಐ

ಹೆಚ್.ಶ್ರೀನಿವಾಸ. ಸಿಬ್ವಂದಿಗಳಾದ ನಾರಾಯಣ., ಬಿ.ಜಯರಾಮ, ರಾಮದಾಸ್, ಸೋಮಪ್ಪ, ಬಿ.ತಿಮ್ಮಪ್ಪ, ತೇಜಕುಮಾರ ಎಂ, ಕೋಷ್ಠಿ ಕಾಳಿಂಗಪ್ಪ ಹಾಗೂ ಮಂಜುನಾಥ  ಭಾಗವಹಿಸಿದ್ದರು.