
ಸಂಜೆವಾಣಿ ನ್ಯೂಸ್
ಮೈಸೂರು: ಅ.06:- ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇಂದು ಮೈಸೂರಿನ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಿ ಅರಮನೆಯ ವೈಭವ ಕಣ್ತುಂಬಿಕೊಂಡರು.
ಅರಮನೆಯ ವಿವಿಧ ಭಾಗಗಳನ್ನು ವೀಕ್ಷಿಸಿದ ನಟಿ, ಭವ್ಯ ವಾಸ್ತುಶಿಲ್ಪ, ಕಲಾತ್ಮಕ ವಿನ್ಯಾಸ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಆಸಕ್ತಿಯಿಂದ ವೀಕ್ಷಿಸಿದರು. ವಿಶೇಷವಾಗಿ ದರ್ಬಾರ್ ಹಾಲ್ ನ ಭವ್ಯತೆ ಮತ್ತು ಅಲಂಕಾರಕ್ಕೆ ಮನಸೋತರು.
ಮೈಸೂರು ಅರಮನೆ ಭಾರತೀಯ ರಾಜಮನೆತನದ ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತ ಪ್ರತೀಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅರಮನೆ ಆವರಣದಲ್ಲಿ ಕೆಲಕಾಲ ಕಳೆದು ಪ್ರವಾಸದ ಅನುಭವವನ್ನು ಸವಿದರು.

























