
ಸಂಜೆವಾಣಿ ನ್ಯೂಸ್
ಮೈಸೂರು, ಅ.05: ನಗರದ ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಉದ್ಯಾನವನಗಳ ನಡುವಿನ ರಸ್ತೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಓಇಃ Sಠಿoಡಿಣs ಆಯೋಜಿಸಿದ್ದ ವಿಶ್ವದ ಅತಿದೊಡ್ಡ ಐ’ಇಖಿಂPಇ ಸೈಕ್ಲಿಂಗ್ ರೇಸ್ಗೆ ಚಾಲನೆ ನೀಡಲಾಯಿತು.
ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತೇಜಸ್ವಿ ಸೂರ್ಯ ಅವರು ಸ್ಪರ್ಧೆಗೆ ಚಾಲನೆ ನೀಡಿದರು.
ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮೈಸೂರಿನಲ್ಲಿ ಮೊದಲ ಬಾರಿಗೆ ಐ’ಇಖಿಂPಇ ಸೈಕ್ಲಿಂಗ್ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಎಲ್ಲಾ ಸ್ಪರ್ಧಿಗಳು ಸುರಕ್ಷಿತವಾಗಿ ಮತ್ತು ಖುಷಿಯಿಂದ ಸವಾರಿ ಮಾಡಬೇಕು ಎಂದು ಶುಭ ಹಾರೈಸಿದರು. ವಿಶೇಷವೆಂದರೆ ತೇಜಸ್ವಿ ಸೂರ್ಯ ಅವರು ಸ್ವತಃ 50 ಕಿ.ಮೀ ರೇಸ್ ವಿಭಾಗದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಸಂಸದ ಯದುವೀರ್ ಒಡೆಯರ್ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಇಂತಹ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಿರುವುದು ಸ್ಪೂರ್ತಿದಾಯಕ. ಮೈಸೂರಿನ ಹವಾಮಾನ ಮತ್ತು ಪರಿಸರ ಇಂತಹ ಸ್ಪರ್ಧೆಗಳಿಗೆ ಪೂರಕವಾಗಿದೆ ಎಂದರು.
ಟೂರ್ ಡಿ ಫ್ರಾನ್ಸ್ ಮಾದರಿಯಲ್ಲಿ ಆಯೋಜನೆ: ಫ್ರಾನ್ಸ್ನ ಪ್ರಸಿದ್ಧ ಟೂರ್ ಡಿ ಫ್ರಾನ್ಸ್ ಸ್ಪರ್ಧೆಯಿಂದ ಪ್ರೇರಿತವಾಗಿ ಯುವ ಸಮುದಾಯಕ್ಕೆ ಹೊಸ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಐ’ಇಖಿಂPಇ ಸೈಕ್ಲಥಾನ್ ಆಯೋಜಿಸಲಾಗಿದೆ.
4 ವಿಭಾಗಗಳಲ್ಲಿ ಸ್ಪರ್ಧೆ:
100 ಕಿ.ಮೀ – ದಿ ರೇಸ್
- 50 ಕಿ.ಮೀ – ದಿ ರೈಡ್
- 20 ಕಿ.ಮೀ – ಫ್ಯಾಮಿಲಿ ರೈಡ್
- 1 ಕಿ.ಮೀ – ಮಕ್ಕಳ ಫನ್ ರೇಸ್
ಈ ಸ್ಪರ್ಧೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಮೆಕ್ಸಿಕೊ, ಶ್ರೀಲಂಕಾ, ಫ್ರಾನ್ಸ್ ಸೇರಿದಂತೆ 5 ದೇಶಗಳು ಮತ್ತು ಭಾರತದ 12 ರಾಜ್ಯಗಳಿಂದ ಸುಮಾರು 1500ಕ್ಕೂ ಹೆಚ್ಚು ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಜಿ.ಪಂ ಸಿಇಒ ಎಸ್. ಯುಕೇಶ್ ಕುಮಾರ್, ಡಿಸಿಪಿ ಕೆ.ಎಸ್. ಸುಂದರ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

























