
ಚಿಂಚೋಳಿ,ಸೆ.28: ತಾಲೂಕಿನ ಕಲ್ಲೂರು ರಸ್ತೆ ಗ್ರಾಮದಲ್ಲಿ ರೈತ ಮಹಿಳೆಯೊಬ್ಬರು ಹಾವು ಕಚ್ಚಿ ಮೃತ ಪಟ್ಟಿದ್ದಾರೆ.
ಅಂಬಿಕಾ ವಿಷ್ಣು ಕೊಂಡಮ ಎಂಬುವವರು ಮೃತ ಪಟ್ಟ ಮಹಿಳೆ.
ಅವರು ಹೊಲದಲ್ಲಿ ಕಳೆ ತೆಗೆಯಲು ಕೂಲಿ ಕೆಲಸಕ್ಕೆ ಹೋದ ವೇಳೆ ಹಾವು ಕಡಿತದಿಂದ ಮೃತಪಟಿದ್ದಾರೆ.
ಮೃತರಿಗೆ ಇಬ್ಬರು ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಿರಿಯಾಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.





















