
ಕಲಬುರಗಿ: ಕಲಬುರಗಿ ಜಿಲ್ಲೆ ಬರಗಾಲ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಸಂಯುಕ್ತ ಹೋರಾಟ ಕರ್ನಾಟಕ ಕಲಬುರಗಿ ಸಂಘಟನೆಯಿಂದ ಸ್ವಯಂಪ್ರೇರಿತ ಕಲಬುರಗಿ ಬಂದ್ ನಡೆಸಲಾಯಿತು.ರೈತ ಸಂಘಟನೆಗಳು ಮತ್ತು ಎಡಪಕ್ಷಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ ಮತ್ತು ಇತರ ಮುಖಂಡರು ಪಾಲ್ಗೊಂಡರು.





























