
ಕಲಬುರಗಿ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸ್ ಅವರ ಜನ್ಮದಿನಾಚರಣೆ ಅಂಗವಾಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ಅಶೋಕ ವೀರನಾಯಕ,ಡಾ.ಕಿರಣ ದೇಶಮುಖ,ನೀಲಕಂಠರಾವ ಮೂಲಗೆ,ನಂದಕುಮಾರ ನಾಗಭುಜಂಗೆ,ಹುಲಗೆಪ್ಪ ಕನಕಗಿರಿ,ಫಾರೂಕ್ ಮಣಿಯಾಲ್,ಅಮರ್ ಅಲ್ಲಮಪ್ರಭು ಪಾಟೀಲ ಮೊದಲಾದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ರೋಗಿಗಳ ಆರೋಗ್ಯ ವಿಚಾರಿಸಿ ಶುಭ ಹಾರೈಸಿದರು.





























