ಕಲಬುರಗಿ: ರಾಜ್ಯದಲ್ಲಿ ಖಾಲಿ ಇರುವ ಉರ್ದು ಮತ್ತು ಮರಾಠಿ ಭಾಷೆಯ ಶಿಕ್ಷಕರ ನೇಮಕಾತಿಯನ್ನು ನಿರ್ಲಕ್ಷಿಸುತ್ತಿರುವದನ್ನು ಖಂಡಿಸಿ ಇಂದು ಆಲ್ ಇಂಡಿಯಾ ಮಜ್ಲಿಸ್ -ಇ- ಇತ್ತೇಹಾದುಲ್ ಮುಸ್ಲಿಮೀನ( ಎಐಎಂಐಎಂ)ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ರಾಜ್ಯಾಧ್ಯಕ್ಷ ಲತೀಫಖಾನ್ ಪಠಾಣ್,ಜಿಲ್ಲಾಧ್ಯಕ್ಷ ಸೈಯದ್ ಮೊಹಮ್ಮದ್ ಸಿರಾಜುದ್ದೀನ್ ಸೋಹೇರವರ್ದಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.