Home ಜಿಲ್ಲೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಹಾಯಕಎಲೆಕ್ಟ್ರಿಕಲ್ ಟೆಕ್ನಿಷಿಯನ್ ತರಬೇತಿಗೆ ಚಾಲನೆ

ಕೇಂದ್ರ ಕಾರಾಗೃಹದಲ್ಲಿ ಸಹಾಯಕಎಲೆಕ್ಟ್ರಿಕಲ್ ಟೆಕ್ನಿಷಿಯನ್ ತರಬೇತಿಗೆ ಚಾಲನೆ

ಕಲಬುರಗಿ,ಜು.02:ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಜನ ಶಿಕ್ಷಣ ಸಂಸ್ಥಾನ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರಾಗೃಹದ ಬಂದಿ ನಿವಾಸಿಗಳಲ್ಲಿ ಪತ್ರಿ ತಂಡಕ್ಕೆ 40 ಜನ ಶಿಭಿರಾರ್ಥಿಗಳನ್ನು ಆಯ್ಕೆ ಮಾಡಿ ಹಮ್ಮಿಕೊಳ್ಳಲಾಗಿದ್ದ ಸಹಾಯಕ ಎಲೆಕ್ಟ್ರಿಕಲ್ ಟಿಕ್ನಿಷಿಯನ್ ತರಬೇತಿ ಕಾರ್ಯಕ್ರಮವನ್ನು ಬುಧವಾರ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಲಬುರಗಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಅವರು ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಸ್ವಾವಲಂಭಿಯಾಗಿ ಬದುಕನ್ನು ನಡೆಸುವುದಕ್ಕೆ ಈ ತರಬೇತಿಗಳು ತಮಗೆ ಸಹಾಯವಾಗಲಿದ್ದು, ಕಾರಾಗೃಹದಲ್ಲಿ ನೀಡುವ ವೃತ್ತಿಪರ ತರಬೇತಿಯ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಂಡು ಉತ್ತಮವಾಗಿ ಬದುಕನ್ನು ನಡೆಸಬೇಕು ಎಂದರು.
ಗುಲಬರ್ಗಾ ಜನ ಶಿಕ್ಷಣ ಸಂಸ್ಥಾನ್‍ದ ನಿರ್ದೇಶಕ ಸುರೇಂದ್ರ ಪಾಟೀಲ್ ಮಾತನಾಡಿ, ತಮ್ಮ ಸಂಸ್ಥೆಯು ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಉಚಿತವಾಗಿ ತರಬೇತಿಗಳನ್ನು ನೀಡುತ್ತಿದೆ. ಈ ಬಾರಿ ಕಲಬುರಗಿ ಕೇಂದ್ರ ಕಾರಾಗೃಹ ಬಂದಿ ನಿವಾಸಿಗಳಿಗೆ ತರಬೇತಿಗಳನ್ನು ನೀಡುವುದಕ್ಕೆ ತÀಮ್ಮ ಸಂಸ್ಥೆಯು ಮುಂದಾಗಿದ್ದು, ಪ್ರಾರಂಭದಲ್ಲಿ 40 ಶಿಬಿರಾರ್ಥಿಗಳಿಗೆ ಸಹಾಯಕ ಎಲೆಕ್ಟ್ರಿಕಲ್ ಟಿಕ್ನಿಷಿಯನ್ ತರಬೇತಿ ನೀಡುತ್ತಿದೆ. ಕಾರಾಗೃಹದ ಬಂದಿ ನಿವಾಸಿಗಳು ತರಬೇತಿಯ ಲಾಭ ಪಡೆದು ಸ್ವಯಂ ಉದ್ಯೋಗದ ಮುಖಾಂತರ ತಮ್ಮ ಜೀವನದ ಕಾಯಕಲ್ಪವನ್ನು ಕಟ್ಟಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಮಾತನಾಡಿ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಹಲವಾರು ತರಬೇತಿಗಳನ್ನು ನೀಡುವ ಉದ್ದೇಶ ಹೊಂದಿದ್ದು, ಅದರ ಪ್ರಯುಕ್ತ, ಗುಲಬರ್ಗಾ ಜನ ಶಿಕ್ಷಣ ಸಂಸ್ಥಾನ್ ಮುಖಾಂತರ ಆಯ್ದ 40 ಜನ ಶಿಕ್ಷಾ ಬಂದಿಗಳಿಗೆ ಎಲೆಕ್ಟ್ರಿಶಿಯನ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್ ಹಾಗೂ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜನ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ಬಸವರಾಜ ಡಾಬಾ, ರಾಜಶೇಕರ್ ಬಿರಾದಾರ್, ತರಬೇತಿದಾರರಾದ ಸೈಯಾದ್ ಬಿಲಾಲ್ ಹಾಗೂ ಸಂಸ್ಥೆಯ ಜೈಲರ್ ಆದ ಶ್ರೀಮಂತಗೌಡ ಪಾಟೀಲ್ ಹಾಗೂ ಕಾರಾಗೃಹದ ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ ಸುರೇಶ್ ಸ್ವಾಗತಿಸಿದರು. ಈ ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ಈ ಸಂಸ್ಥೆಯ ಬಂದಿ ಶಿವಶಂಕರ ಪ್ರಾರ್ಥನಾ ಗೀತೆಯನ್ನು ಹಾಡಿದರು.