
ಬಸವಕಲ್ಯಾಣ: ಮೌನವೆಂದರೆ ಶಬ್ದದ ಕೊರತೆ ಅಲ್ಲ, ಅದೊಂದು ವಿವೇಚನೆಯ ಗರಿಷ್ಠ ಹಂತ, ಹಾಗಾಗಿ ಯಾರು ಅಂತರಾತ್ಮದ ಮೌನ ಅನುಸರಿಸುವರೊ ಅಂಥಹವರು ಪರಮಾತ್ಮನ ಕಕ್ಷೆಯಲ್ಲಿ ಪ್ರವೇಶ ಪಡೆಯುತ್ತಾರೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ಧರ್ಮ ಸಭೆಯ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸಂಸಾರದಲ್ಲಿ ಬರುವ ಅನೇಕ ಅವಘಢಗಳನ್ನು ತಪ್ಪಿಸಲು ಮೌನವನ್ನು ಒಂದು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಬಹುದಾಗಿದೆ.
ಒಂದು ಕ್ಷಣದ ಮೌನದಿಂದ ವರ್ಷಗಟ್ಟಲೆ ಪಡುವ ಪಶ್ಚತ್ತಾಪವನ್ನು ಖಂಡಿತ ತಪ್ಪಿಸಬಹುದು, ವ್ಯಕ್ತಿ, ಸಮಯ, ಸಂದರ್ಭಗಳಿಗೆ ಅನುಗುಣವಾಗಿ ಮೌನಕ್ಕೆ ಜಾರುವ ಕಲೆ ತಿಳಿದವ ನೆಮ್ಮದಿಯಿಂದ ಬದುಕಬಲ್ಲ ಎಂದು ಹೇಳಿದ ಪೂಜ್ಯರು ಸಮಸ್ತ ಭಕ್ತ ಸಂಕುಲ ಶ್ರೇಯಸ್ಸಿನಿಂದ ಬದುಕುವಂತಾಗಲಿ ಎಂದು ಶುಭ ಹಾರೈಸಿದರು.
ಬಸವರಾಜ ಪೊಲೀಸ್ ಪಾಟೀಲ, ರಾಜಕುಮಾರ ಯಾಚೆ, ಜಯಪ್ರಕಾಶ ಬಿರಾದಾರ, ಮಹಾಂತಪ್ಪ ಶ್ರೀಚಂದ, ಸುಧಾಕಾರ ಪಾಟೀಲ, ಜಗನ್ನಾಥ ಕಾರಭಾರಿ, ಗೋವಿಂದ ರೆಡ್ಡಿ, ಶ್ರೀರಂಗ ಜಮಾದಾರ ಉಪಸ್ಥಿತರಿದ್ದರು.
ಧನರಾಜ ಕ್ಷೀರಸಾಗರ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಹಾಗೂ ಶರಣಪ್ಪ ಜಮಾದಾರ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಧನರಾಜ ಕ್ಷೀರಸಾಗರ ಸಿರಗಾಪೂರ ಪರಿವಾರದ ವತಿಯಿಂದ ಹಾರಕೂಡ ಶ್ರೀಗಳ ೧೦೨೦ನೇ ತುಲಾಭಾರ ಜರುಗಿತು.
ಚಿತ್ರ : ಬಸವಕಲ್ಯಾಣ ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ಧರ್ಮ ಸಭೆಯನ್ನು ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಬಸವರಾಜ ಪೊಲೀಸ್ ಪಾಟೀಲ, ರಾಜಕುಮಾರ ಯಾಚೆ, ಜಯಪ್ರಕಾಶ ಬಿರಾದಾರ, ಮಹಾಂತಪ್ಪ ಶ್ರೀಚಂದ, ಧನರಾಜ ಕ್ಷೀರಸಾಗರ ಅಂಬರಾಯ ಪೂಜಾರಿ, ಭಾಗಣ್ಣ ಪೂಜಾರಿ ಉಪಸ್ಥಿತರಿದ್ದರು.





























