Home ಜಿಲ್ಲೆ ಬೀದರ ಮ್ಯಾರಥಾನ್ ಲೋಗೋ ಬಿಡುಗಡೆಗೊಳಿಸಿದ ಡಾ. ರೇಷ್ಮಾ ಕೌರ್

ಬೀದರ ಮ್ಯಾರಥಾನ್ ಲೋಗೋ ಬಿಡುಗಡೆಗೊಳಿಸಿದ ಡಾ. ರೇಷ್ಮಾ ಕೌರ್

ಬೀದರ: ಮೈಲೂರ ರಸ್ತೆಯಲ್ಲಿರುವ ಗುರು ನಾನಕ ದೇವ್ ಇಂಜಿನೀಯರಿAಗ್ ಕಾಲೇಜ್‌ನ ಗುರು ಭವನದಲ್ಲಿ ಸೋಮವಾರ ೨೭-೭-೨೦೨೬ ರಂದು ಬೀದರ ಮ್ಯಾರಥಾನ್ ಲೋಗೋ ಬಿಡುಗಡೆೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನವೆಂಬರ್ ೧೫, ೨೦೨೬ ರವಿವಾರದಂದು ಬೀದರ ಮ್ಯಾರಥಾನ್ ೨.೦, ಶಾಂತಿಗಾಗಿ ಓಡಿ, ಮಾನವತೆಗಾಗಿ ಓಡಿ ಎಂಬ ಧ್ಯಯದೊಂದಿಗಿದೆ ಗುರು ನಾನಕ ಶಿಕ್ಷಣ ಸಂಸ್ಥೆಯಿAದ ಮ್ಯಾರಥಾನ್ ಹಮ್ಮಿಕೊಳ್ಳಾಗಿದೆ.
ಮ್ಯಾರಥಾನ್ ನಾಲ್ಕು ಪ್ರಕಾರವಾಗಿ ವಿಂಡಗಣೆ ಮಾಡಲಾಗಿದೆ. ೩ ಕಿ.ಮೀ, ೫ ಕಿ.ಮೀ, ೧೦ ಕಿ.ಮೀ ಮತ್ತು ೨೧ ಕಿ.ಮೀ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ತಿಳಿಸಿದರು.
ಮ್ಯಾರಥಾನ್ ಮೂಲಕ ಬೀದರ ಜಿಲ್ಲೆಯನ್ನು ಒಂದು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ. ರಾಷ್ಟçಮಟ್ಟದ ಕ್ರೀಡಾಪಟುಗಳು ಜಿಲ್ಲೆಗೆ ಆಗಮಿಸುವುದರಿಂದ ಇಲ್ಲಿರುವ ಮಠ, ಮಸೀದಿ, ಮಂದಿರ, ಗುರುದ್ವಾರ ಮತ್ತು ಧಾರ್ಮಿಕ ಸ್ಥಳಗಳ ವೀಕ್ಷಣೆ ಮಾಡುತ್ತಾರೆ, ಪ್ರತೀ ವರ್ಷ ಮ್ಯಾರಥಾನ್ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ ಎಂದರು.
ಗುರುನಾನಕ ಶಾಲೆಯಲ್ಲಿ ಅಧ್ಯಯನ ಮಾಡಿದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯ, ಅಭಿಯಂತರರು, ಶಿಕ್ಷಕರು ಸೇರಿದಂತೆ ಹಲವಾರು ವೃತ್ತಿಗಳಲ್ಲಿ ಹೆಸರು ಪಡೆದುಕೊಂಡಿದ್ದಾರೆ. ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವುದು ನಮ್ಮ ಶಾಲೆಯ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಕೇವಲ ಶಿಕ್ಷಣ ಮಾತ್ರವಲ್ಲ ಅದರ ಜೊತೆಜೊತೆಗೆ ಉತ್ತಮ ಸಂಸ್ಕಾರ ನೀಡಲಾಗುತ್ತಿದೆ ಎಂದು ಡಾ. ರೇಷ್ಮಾ ಕೌರ್ ತಿಳಿಸಿದರು.
ಈ ಸಂದರ್ಭದಲ್ಲಿ ಪುನಿತ್ ಸಿಂಗ್, ಪವೀತ್ ಸಿಂಗ್, ಗುರು ನಾನಕ ಆಸ್ಪತ್ರೆಯ ಇ.ಎನ್.ಟಿ. ಡಾ. ನಿಶಾ ಕೌರ್, ಡಾ. ಜಸ್ಮಿನೀತ್ ಕೌರ್, ಜಠರ-ಕರುಳು ರೋಗ ತಜ್ಞ ಡಾ. ಸಂತೋಷ ಕುಮಾರ, ಸ್ತಿçÃರೋಗ, ಐವಿಎಫ್ ತಜ್ಞ ಡಾ. ಸಂದೀಪ ಗಾಯಕವಾಡ, ಜನರಲ್ ಮೇಡಿಸಿನ್ ತಜ್ಞ ಡಾ. ನವ್ಯಶ್ರೀ ಮತ್ತು ಅರ್ಥೋಪೆಡಿಕ್ ತಜ್ಞ ವೀರೇಶ್ ಗೋರಶೆಟ್ಟಿ, ಗುರು ನಾನಕ ಆಸ್ಪತ್ರೆಯ ಸಿ.ಇ.ಓ. ಕಾಮೇಶ್ವರ ರಾವ, ಕರ್ನಲ್ ಆರ್.ಡಿ.ಸಿಂಗ್ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.