
ಕಲಬುರಗಿ,ಜು.28: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕೇಂದ್ರ ಗ್ರಂಥಾಲಯ ವತಿಯಿಂದ ಹೊಸದಾಗಿ ಸೇರ್ಪಡೆಗೊಂಡ ಬೋಧನಾ ಸಿಬ್ಬಂದಿಗಾಗಿ “ಗ್ರಂಥಾಲಯ ಇ-ಸಂಪನ್ಮೂಲಗಳು” ಬಳಕೆದಾರರ ಜಾಗೃತಿ ಕುರಿತು ಕೇಂದ್ರ ಗ್ರಂಥಾಲಯದ ಡಾ. ಎಸ್. ಆರ್. ರಂಗನಾಥನ್ ಸೆಮಿನಾರ್ ಹಾಲ್‍ನಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಅಧ್ಯಾಪಕರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಬೇಕೇ ಹೊರತು, ನಮ್ಮ ಶೈಕ್ಷಣಿಕ ಬರವಣಿಗೆಗಾಗಿ ಹಾಗೂ ಸಂಶೋಧನೆಗಾಗಿ ಎ.ಐ ಮೇಲೆ ಅತಿಯಾದ ಅವಲಂಬನೆಯನ್ನು ಹೊಂದಬಾರದು ಎಂದು ಹೇಳಿದರು.
“ಶಿಕ್ಷಕರು ಎಐಪರಿಕರಗಳನ್ನು ಅವಲಂಬಿಸುವ ಬದಲು, ಗ್ರಂಥಾಲಯ, ಓದುವಿಕೆ ಹಾಗೂ ಮೂಲ ಸಂಶೋಧನೆಯ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಎಐ ಮೇಲಿನ ಅತಿಯಾದ ಅವಲಂಬನೆಯು ನಮ್ಮ ಸ್ವತಂತ್ರ ಚಿಂತನೆಗೆ, ವಿಶ್ಲೇಷಣಾತ್ಮಕ ಸಾಮಥ್ರ್ಯಕ್ಕೆ ಹಾಗೂ ನಮ್ಮ ಸ್ವಂತಿಕೆಯನ್ನು ಕುಗ್ಗಿಸುವ ಸಾಧ್ಯತೆಯಿದೆ. ನಮ್ಮ ಶಿಕ್ಷಕರ ಜ್ಞಾನ, ಸೃಜನಶೀಲತೆ ಮತ್ತು ಶೈಕ್ಷಣಿಕ ಪ್ರಾಮಾಣಿಕತೆಯೇ ಗುಣಮಟ್ಟದ ಶಿಕ್ಷಣಕ್ಕೆ ನಿಜವಾದ ಅಡಿಪಾಯವಾಗಿದೆ” ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯ ಹಾಗೂ ಅದರ ಸಮೃದ್ಧ ಇ-ಸಂಪನ್ಮೂಲಗಳನ್ನು ಅಧ್ಯಾಪಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಭಾರತ ಸರ್ಕಾರವು “ಒಂದು ರಾಷ್ಟ್ರಒಂದು ಚಂದಾದಾರಿಕೆ ಯೋಜನೆಯಡಿ ಸುಮಾರು 13,000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸಂಶೋಧನಾ ಜರ್ನಲ್‍ಗಳಿದ್ದು, ಅವುಗಳು ನಮ್ಮ ಅಧ್ಯಾಪಕರು ಮತ್ತು ಸಂಶೋಧಕರಿಗೆ ವಿಶ್ವದರ್ಜೆಯ ಶೈಕ್ಷಣಿಕ ಸಾಹಿತ್ಯವನ್ನು ಸುಲಭವಾಗಿ ಪಡೆಯಲು ನೆರವಾಗುತ್ತಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಶ್ವವಿದ್ಯಾಲಯವು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳು ಹಾಗೂ ಸಂಶೋಧನಾ ಸೌಲಭ್ಯಗಳನ್ನು ಹೊಂದಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಧ್ಯಾಪಕರು ಮತ್ತು ಸಂಶೋಧಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. ಸಂಶೋಧನೆಯಲ್ಲಿ ಕೃತಿಚೌರ್ಯವನ್ನು ತಪ್ಪಿಸಿ, ನಮ್ಮ ಸ್ವಂತ ಸಂಶೋಧನಾ ಬರವಣಿಗೆಯ ಶೈಲಿಯನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಮೂಲ ಸಂಶೋಧನೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಸಿಯುಕೆ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪೆÇ್ರ. ಪಾಂಡುರಂಗ ವಿ. ಅವರು ಆಧುನಿಕ ಡಿಜಿಟಲ್ ಸಂಪನ್ಮೂಲಗಳ ಲಭ್ಯತೆಯಿಂದ ಸಂಶೋಧನಾ ಕಾರ್ಯವು ಹಿಂದೆಂದಿಗಿಂತಲೂ ಈಗ ಸುಲಭವಾಗಿದೆ ಎಂದು ಹೇಳಿದರು. ಹಿಂದಿನ ದಿನಗಳಲ್ಲಿ ಸಂಶೋಧಕರು ಹಲವಾರು ಗ್ರಂಥಾಲಯಗಳಿಗೆ ಭೇಟಿ ನೀಡಿ, ಸಾಹಿತ್ಯದ ಮಾಹಿತಿ ಸಂಗ್ರಹಿಸಬೇಕಾಗುತ್ತಿತ್ತು. ಆದರೆ ಶಿಕ್ಷಣ ಸಚಿವಾಲಯದ ಓಎನ್ ಓ ಎಸ್ ಯೋಜನೆಯಿಂದ ಇಂದು ದೇಶದಾದ್ಯಂತ ಅಧ್ಯಾಪಕರು ಮತ್ತು ಸಂಶೋಧಕರಿಗೆ ಸಾವಿರಾರು ಗುಣಮಟ್ಟದ ಸಂಶೋಧನಾ ಜರ್ನಲ್‍ಗಳು ಈಗ ಸುಲಭವಾಗಿ ಲಭ್ಯವಾಗುತ್ತಿವೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಸುಸಜ್ಜಿತ ಕೇಂದ್ರ ಗ್ರಂಥಾಲಯ ಹಾಗೂ ಅದರ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಡಾ. ಪಿ. ಎಸ್. ಕಟ್ಟಿಮನಿ ಆವರು ಸ್ವಾಗತಿಸಿದರು. ಕಾರ್ಯಾಗಾರದ ಅಂಗವಾಗಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ಗ್ರಂಥಾಲಯ ವೃತ್ತಿಪರರು ತಾಂತ್ರಿಕ ಅವಧಿಗಳನ್ನು ತೆಗೆದುಕೊಂಡರು. ಗ್ರಂಥಾಲಯ ಇ-ಸಂಪನ್ಮೂಲಗಳು, ಕೃತಿಚೌರ್ಯ ಪತ್ತೆ ಪರಿಕರಗಳು, ಗ್ರಾಮರಲಿ ಹಾಗೂ ಕೇಂದ್ರ ಗ್ರಂಥಾಲಯದ ಮೂಲಕ ಲಭ್ಯವಿರುವ ಇತರೆ ಡಿಜಿಟಲ್ ಸಂಶೋಧನಾ ಸೇವೆಗಳ ಪರಿಣಾಮಕಾರಿ ಬಳಕೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಂದ ಹೊಸದಾಗಿ ಸೇರ್ಪಡೆಗೊಂಡ ಅಧ್ಯಾಪಕರು ಭಾಗವಹಿಸಿದ್ದರು. ಗ್ರಂಥಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಾದ ಡಾ. ಸತೀಶ್ ವಿ. ತೋಟರ್, ಡಾ. ಜಿ. ಜೆ. ಪಿ. ದೀಕ್ಷಿತ್ ಹಾಗೂ ಗ್ರಂಥಾಲಯ ಸಿಬ್ಬಂದಿಗಳಾದ ರಾಜ್‍ಕುಮಾರ್ ಕಲ್ಯಾಣಿ, ರಾಜೇಶ್ ಸಿ. ದಾಸ್, ಬಸವರಾಜ್ ಯಾದವಾಡ, ನಿಂಗಣ್ಣ ಎಂ. ಜಿ., ಪ್ರಕಾಶ ಎಸ್. ಎನ್.,ಸಾಗರ್ ಕಬಾಡೆ, ಸತೀಶ್ ಕುಮಾರ್ ಮತ್ತು ಶಿವಕುಮಾರ್ ಜಿ. ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪ್ರಕಾಶ ಎಸ್. ಎನ್. ನಿರೂಪಿಸಿದರು. ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಪ್ರಾರಂಭಗೊಂಡು, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.





























