
ಬೀದರ:ಸಿಬ್ಬಂದಿ ವರ್ಗದವರು ಕೆಲಸದಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಡೀನರಾದ ಡಾ. ವಿಕ್ರಮ್ ವಿಸಾಜಿಯವರು ನುಡಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು ಮತ್ತು ಪ್ರಾಚಾರ್ಯರಿಗಾಗಿ ನಡೆದ ಎರಡು ದಿನಗಳ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಇತಿಹಾಸ ಬಹಳಷ್ಟಿದೆ. ಈ ಸಂಸ್ಥೆ ಸಾವಿರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟ ಸಂಸ್ಥೆಯಾಗಿದೆ ಇಂತಹ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯವರಲ್ಲಿ ಸಮಾಜಕ್ಕೆ, ನಾಡಿಗೆ, ಏನಾದರು ಕೊಡುಗೆ ಕೊಡಬೇಕೆಂಬ ಭಾವನೆ ಬರಬೇಕು. ಸಿಬ್ಬಂದಿಯವರಿಗೆ ತರಬೇತಿಗಿಂತ ಸ್ವ-ಇಚ್ಛೆ ಇರಬೇಕು. ಮಾಡುವ ಕೆಲಸದ ಮೇಲೆ ಗೌರವ, ನಂಬಿಕೆ, ಕ್ರಿಯಾಶೀಲತೆ ಇರಬೇಕು. ಸಿಬ್ಬಂದಿವರ್ಗದವರು ತಮ್ಮನ್ನು ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ನಿರಂತರವಾಗಿ ಕೇಲಸಮಾಡುತ್ತಿದರೆ ಅದರ ಆಳ-ಅಗಲ ಸಂಪೂರ್ಣವಾಗಿ ತಿಳಿಯುತ್ತದೆ. ಮಾಡುವ ಕೆಲಸದಲ್ಲಿ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಸಿಬ್ಬಂದಿ ವರ್ಗದವರು ದೃಢ ಸಂಕಲ್ಪ ಹೊಂದಿರಬೇಕು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಶ್ರೇಷ್ಠ ಪರಂಪರೆ ಹೊಂದಿದೆ. ಈ ಸಂಸ್ಥೆ ಇನ್ನೂ ದೊಡ್ಡದಾಗಿ ಬೆಳೆಯಬೇಕಾದರೆ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಗಣಪತಿ ಸಿನ್ನೂರ ಅವರು ಶಿಕ್ಷಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವಿಭಿನ್ನ ಬಗೆಯ ವಿದ್ಯಾರ್ಥಿಗಳನ್ನು ನಿಭಾಯಿಸುವ ಸಾಮರ್ಥ್ಯ ಬೆಳೆಯಿಸಿಕೊಳ್ಳಬೇಕು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಶಾಂತಿವರ್ಧಕ ವಿಶ್ವವಿದ್ಯಾಲಯ ಆಗಬೇಕು. ಸಿಬ್ಬಂದಿಯವರು ಕಾಲ ಬದಲಾದಂತೆ, ವ್ಯವಸ್ಥೆ ಬದಲಾದಂತೆ , ಪರಿಸ್ಥಿತಿ ಬದಲಾದಂತೆ ಬದಲಾಗುವುದು ಅನಿವರ್ಯ. ಇಂತಹ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಸಿಬ್ಬಂದಿ ವರ್ಗದವರಲ್ಲಿ ಬರಬೇಕು ಎಂದು ನುಡಿದರು.
ಕಾರ್ಯಕ್ರಮದ ಪಾರಂಭದಲ್ಲಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುರೇಂದ್ರನ್ ಆರ್ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರೋ.ಅಂಕುಶ ಡೋಲೆಯವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ಕಮಲಾ ಸಿರ್ಸೆ ಸಂಸ್ಥೆಯ ಸಂಯೊಜಕರು, ಡಾ. ಉದಯಕುಮಾರ ಕಲ್ಯಾಣಿ ಪ್ರಾಂಶುಪಾಲರು, ಬಿ.ಕೆ.ಐ.ಟಿ. ಭಾಲ್ಕಿ. ಶ್ರೀ ಗುರುನಾಥ ಕುಡ್ತೆ ಎಚ್.ಆರ್. ಮ್ಯನೇಜರ್ ಹಾಗೂ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





























