Home Lead News ನಕಲಿ ಔಷಧ ಜಪ್ತಿ

ನಕಲಿ ಔಷಧ ಜಪ್ತಿ

ಓರ್ವನ ಬಂಧನ

ಬೆಂಗಳೂರು/ಬಿಡದಿ,ಆ.೧೯- ರಾಜಧಾನಿ ಬೆಂಗಳೂರು ಹೊರವಲಯದ ಬಿಡದಿ ಟೋಲ್ ಗೇಟ್ ಬಳಿಯ ಹೆಜ್ಜಾಲ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ನಕಲಿ ಔಷಧ ಜಾಲವನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಾರಿ ವಿಭಾಗ ಯಶಸ್ವಿಯಾಗಿ ಭೇದಿಸಿದೆ.
ದಾಳಿಯ ವೇಳೆ ಸುಮಾರು ೬ ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳು ಹಾಗೂ ಹೆಸರಾಂತ ಬಹುರಾಷ್ಟ್ರೀಯ ಫಾರ್ಮಾ ಕಂಪನಿಗಳ ನಕಲಿ ಲೇಬಲ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಚೇತನ್ ಗೆ ಬಲೆ ಬೀಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಈ ಬಗ್ಗೆ ಮಾಹಿತಿ ನೀಡಿದ್ದು, ಜನರ ಪ್ರಾಣದೊಂದಿಗೆ ಆಟವಾಡುತ್ತಿದ್ದ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಕಲಿ ಔಷಧ ದಂಧೆಯ ಹಿಂದೆ ದೊಡ್ಡ ಜಾಲವೇ ಸಕ್ರಿಯವಾಗಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್, “ಒಂದೇ ದಿನದಲ್ಲಿ ೬ ಕೋಟಿ ರೂ. ಮೌಲ್ಯದ ನಕಲಿ ಔಷಧ ಸಿಕ್ಕಿದೆ ಎಂದರೆ, ಈಗಾಗಲೇ ಸಾರ್ವಜನಿಕರಿಗೆ ಎಷ್ಟು ಕೋಟಿ ಮೌಲ್ಯದ ನಕಲಿ ಔಷಧ ತಲುಪಿರಬಹುದು ಎಂಬ ಆತಂಕ ಕಾಡುತ್ತಿದೆ ಎಂದರು.

ಈ ಔಷಧಗಳನ್ನು ಪ್ರಮುಖ ಆಸ್ಪತ್ರೆಗಳ ಐಸಿಯು ವಿಭಾಗಗಳಿಗೂ ಸರಬರಾಜು ಮಾಡಿರುವ ಶಂಕೆಯಿದೆ,” ಎಂದರು.ಈ ಪ್ರಕರಣದ ಸಂಪೂರ್ಣ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ರಾಜ್ಯದಲ್ಲಿ ನಕಲಿ ಹಾಗೂ ಮರುಲೇಬಲಿಂಗ್ ಮಾಡಿದ ಔಷಧಗಳ ದೊಡ್ಡ ಜಾಲವೊಂದು ಬಯಲಾಗಿದ್ದು, ಇದು ದೇಶವ್ಯಾಪಿ ವಿಸ್ತರಿಸಿರುವ ಆತಂಕ ವ್ಯಕ್ತವಾಗಿದೆ. ಬಿಡದಿ ಸಮೀಪದ ಕುರುಬರಕರಣಹಳ್ಳಿಯ ಫಾರ್ಮ್‌ಹೌಸ್ ಒಂದರ ಮೇಲೆ ದಾಳಿ ನಡೆಸಿರುವ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ (ಈಆಂ) ಎನ್ಫೋರ್ಸ್‌ಮೆಂಟ್ ವಿಭಾಗದ ಅಧಿಕಾರಿಗಳು, ಬರೋಬ್ಬರಿ ೪.೯೧ ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಗಳು ಹಾಗೂ ಪ್ಯಾಕಿಂಗ್ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಅಕ್ರಮ ಜಾಲವು ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಿಂದ ಕಡಿಮೆ ಬೆಲೆಯ ಔಷಧಗಳನ್ನು ತಂದು, ಅವುಗಳನ್ನು ಮರುಪ್ಯಾಕ್ ಮಾಡಿ ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಹಾಗೂ ’ಫೈಜರ್’ನಂತಹ ವಿದೇಶಿ ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ ರಾಜ್ಯದ ವಿವಿಧ ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಿಗೆ ಪೂರೈಸುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಆಸ್ಪತ್ರೆಗಳಲ್ಲೂ ಬಳಕೆಯಾಗಿರುವ ಸಚಿವ ಖಾದರ್ ಶಂಕೆ ವ್ಯಕ್ತಪಡಿಸಿದ್ದಾರೆ.

ದಾಳಿಯ ವೇಳೆ ಸಿಕ್ಕಿದ್ದೇನು೫,೬೪೦ ವೈಯಲ್‌ಗಳು

ಸೆಫಿಯಾವಿಜೆಂಟ್ ೨.೫’ ಚುಚ್ಚುಮದ್ದು೧,೫೩೧ ವೈಯಲ್‌ಗಳು: ’ಹಿಜ್ಲಾಮ್’ ಇಂಜೆಕ್ಷನ್‌ಗಳು೩೦ ಬಾಕ್ಸ್‌ಗಳು: ಅವಧಿ ಮುಗಿದ ಔಷಧಗಳುಇತರ ಸಾಮಗ್ರಿಗಳು: ಚುಚ್ಚುಮದ್ದು ಭರ್ತಿ ಮಾಡುವ ಯಂತ್ರಗಳು, ನಕಲಿ ಲೇಬಲ್‌ಗಳು ಮತ್ತು ಪ್ಯಾಕಿಂಗ್ ವಸ್ತುಗಳು.ಫಾರ್ಮ್‌ಹೌಸ್ ಮಾಲೀಕರು ಮತ್ತು ಆರೋಪಿಗಳುದಾಳಿ ನಡೆದ ಫಾರ್ಮ್‌ಹೌಸ್ ಸಿದ್ದಯ್ಯ ಎಂಬುವರಿಗೆ ಸೇರಿದ್ದಾಗಿದ್ದು, ಇದನ್ನು ದುಬೈ ನಿವಾಸಿ ಪ್ರಶಾಂತ್ ಎಂಬಾತ ಬಾಡಿಗೆಗೆ ಪಡೆದುಕೊಂಡಿದ್ದ. ಪ್ರಶಾಂತ್‌ನ ಬಂಧು ತೇಜಸ್ ಹಾಗೂ ಸ್ಥಳೀಯವಾಗಿ ಕೆಲಸ ಮಾಡುತ್ತಿದ್ದ ಪ್ರಭುದೇವ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.”

ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ಔಷಧ ಕಾರ್ಖಾನೆಗಳಿಂದ ಇವುಗಳನ್ನು ತರಲಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಔಷಧಗಳನ್ನು ಯಾವ್ಯಾವ ಆಸ್ಪತ್ರೆಗಳಲ್ಲಿ ಬಳಸಲಾಗಿದೆ ಮತ್ತು ಇದರಿಂದ ರೋಗಿಗಳಿಗೆ ತೊಂದರೆ ಸಾವು ಸಂಭವಿಸಿದೆಯೇ ಎಂಬುದರ ಕುರಿತು ವಿಸ್ತೃತ ತನಿಖೆ ನಡೆಯಲಿದೆ.

ಯು.ಟಿ. ಖಾದರ್, ಆರೋಗ್ಯ ಸಚಿವರುಮುಂದಿನ ಕ್ರಮಗಳು:
ಲ್ಯಾಬ್ ಪರೀಕ್ಷೆಗೆ ರವಾನೆ:

ವಶಪಡಿಸಿಕೊಂಡ ಔಷಧಗಳ ಮಾದರಿಗಳನ್ನು ರಾಸಾಯನಿಕ ತಪಾಸಣೆ ಮತ್ತು ಪ್ರತ್ಯೇಕ ಪರೀಕ್ಷೆಗೆ ಕಳುಹಿಸಲಾಗಿದೆ. ಈ ನಕಲಿ ಬ್ಯಾಚ್ ಸಂಖ್ಯೆಯ ಔಷಧಗಳು ಮತ್ತೆ ಮಾರಾಟವಾಗದಂತೆ ಈಆಂ ಪೋರ್ಟಲ್‌ನಲ್ಲಿ ಲಾಗ್ ಮಾಡಲಾಗಿದೆ.

ತೆಲಂಗಾಣ, ಹಿಮಾಚಲ ಪ್ರದೇಶ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ ತನಿಖೆಗೆ ಸಹಕರಿಸಲು ಕೋರಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ರಾಮನಗರ ಎಸ್.ಪಿತೆಯಲ್ಲಿ ಜಂಟಿ ತನಿಖೆ ಮುಂದುವರಿದಿದೆ.

೧೦ ಪಟ್ಟು ಹೆಚ್ಚಿನ ಬೆಲೆಗೆ ಕಳಪೆ ಔಷಧ ಮಾರಾಟ

ಯಾವುದೇ ಅಧಿಕೃತ ತಯಾರಿಕಾ ಅಥವಾ ಪ್ಯಾಕಿಂಗ್ ಪರವಾನಗಿ ಇಲ್ಲದೆ ಈ ಘಟಕ ನಡೆಯುತ್ತಿತ್ತು. ಖದೀಮರು ಕೇವಲ ೬೦೦ ರಿಂದ ೭೦೦ ರೂಗಳಿಗೆ ತೀರ ಕಳಪೆ ಮಟ್ಟದ ಔಷಧಗಳನ್ನು ಖರೀದಿ ಮಾಡುತ್ತಿದ್ದರು. ನಂತರ ’ಸ್ಟಿಕ್ಕರ್ ರಿಮೂವರ್ ಸ್ಪ್ರೇ’ ಬಳಸಿ ಅವುಗಳ ಮೇಲಿದ್ದ ಮೂಲ ಲೇಬಲ್‌ಗಳನ್ನು ತೆರವುಗೊಳಿಸಿ, ಜಾಗತಿಕ ದೈತ್ಯ ಸಂಸ್ಥೆಯಾದ ’ಫೈಜರ್’ ( ಸೇರಿದಂತೆ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್‌ಗಳನ್ನು ಅಂಟಿಸುತ್ತಿದ್ದರು.
ಹೀಗೆ ಮರುಪ್ಯಾಕ್ ಮಾಡಿದ ಔಷಧಗಳನ್ನು ಚಿಲ್ಲರೆ ಔಷಧ ಅಂಗಡಿಗಳಿಗೆ ೬,೦೦೦ ರಿಂದ ೭,೦೦೦ ದರದಲ್ಲಿ (ಹತ್ತು ಪಟ್ಟು ಹೆಚ್ಚು ಬೆಲೆಗೆ) ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ.


೮೭ ಕೋಟಿ ಹಣ ವರ್ಗಾವಣೆ


ತನಿಖೆಯ ವೇಳೆ ನಕಲಿ ಔಷಧ ಮಾರಾಟ ಹಾಗೂ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಂದಿದೆ. ಹೈದರಾಬಾದ್ ಮೂಲದ ವಿವಿಧ ಬ್ಯಾಂಕ್‌ಗಳ ಸುಮಾರು ೮೦೦ ಖಾತೆಗಳಿಗೆ ಸರಿ ಸುಮಾರು ೮೭ ಕೋಟಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಈ ಆರ್ಥಿಕ ವಹಿವಾಟಿನ ಕುರಿತು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜಪ್ತಿಯಾದ ಸಾಮಗ್ರಿಗಳು


ತನಿಖೆ ತೀವ್ರಗೊಳಿಸಿದ ಇಲಾಖೆ:


ಶಂಕಿತ ಖಾತೆಗಳ ಜಪ್ತಿ ಮತ್ತು ಜಾಲದಲ್ಲಿದ್ದ ಪ್ರಮುಖ ಸೂತ್ರಧಾರರ ಬಂಧನಕ್ಕೆ ಜಾಲ ಬೀಸಲಾಗಿದೆ.ರಾಜ್ಯಾದ್ಯಂತ ಔಷಧ ಮಳಿಗೆಗಳು ಹಾಗೂ ಗೋದಾಮುಗಳ ಮೇಲೆ ನಿಗಾ ವಹಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.ನಕಲಿ ಔಷಧಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

*ಹಿಮಾಚಲ ಪ್ರದೇಶ, ತೆಲಂಗಾಣದಿಂದ ಕಮ್ಮಿ ಬೆಲೆಗೆ ತಂದು


*ಫೈಜರ್’ ಸೇರಿ ದೈತ್ಯ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ*


*ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೆ ಸರ್ಕಾರದ ಚಿಂತನೆ:

  • ೬ ಕೋಟಿ ಮೌಲ್ಯದ ನಕಲಿ ಔಷಧ, ಜಾಲ ಭೇದಿಸಿದ
    ಎಫ್‌ಡಿಎ ಫೈಜರ್’ ಸೇರಿ ದೈತ್ಯ ಕಂಪನಿಗಳ ಲೇಬಲ್
  • ಬಿಡದಿ ಟೋಲ್ ಗೇಟ್ ಸಮೀಪದ ಹೆಜ್ಜಾಲದಲ್ಲಿ ಪರವಾನಗಿ
    ರಹಿತ ಮರುಪ್ಯಾಕೇಜಿಂಗ್ ಘಟಕದ ಮೇಲೆ ದಾಳಿ

*೬೦೦ರ ಕಳಪೆ ಔಷಧಕ್ಕೆ ’ಫೈಜರ್’ ಲೇಬಲ್ ಅಂಟಿಸಿ
೭,೦೦೦ಕ್ಕೆ ಮಾರಾಟ ಮಾಡುತ್ತಿದ್ದ ಖದೀಮರು

*ಕೌಶಿ…’ ಹೆಸರಿನ ಇನ್‌ವಾಯ್ಸ್, ಸ್ಟಿಕ್ಕರ್ ಸ್ಪ್ರೇ,
ನೋಚಿಂಗ್ ಮೆಷಿನ್, ಬ್ರ್ಯಾಂಡೆಡ್ ಲೇಬಲ್‌ಗಳು ವಶ