
ಕಲಬುರಗಿ,ಆ.19-ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸಂಗೀತ ಹಾಗೂ ಭಜನಾ ಸಂಘ ಉದ್ಘಾಟನೆ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನವ ಕರ್ನಾಟಕ ಸಂಗೀತ ಪದವೀಧರ ಸಂಘದ ರಾಜ್ಯಾಧ್ಯಕ್ಷರಾದ ಬಂಡಯ್ಯ ಸ್ವಾಮೀಜಿ ಸುಂಟನೂರ ಅವರು, ಸೊನ್ನ ಗ್ರಾಮ ಶಿಕ್ಷಣ, ಸಂಗೀತ, ಸಾಹಿತ್ಯ ಕಲೆಗಳಿಂದ ರಾಜ್ಯದ ತುಂಬಾ ಪ್ರಸಿದ್ಧಿ ಪಡೆದ ಗ್ರಾಮ ಗ್ರಾಮದ ಹಿರಿಯರಾದ ಲಿಂ.ವಿರೂಪಾಕ್ಷಯ್ಯ ನಂದರಗಿಮಠ ಅವರ ಸಂಕಲ್ಪದಂತೆ ಇಂದು ಈ ಸಂಘವು ಉದ್ಘಾಟನೆಗೊಂಡಿದೆ. ಗ್ರಾಮದಲ್ಲಿ ಅನೇಕ ವರ್ಷಗಳಿಂದ ಭಜನೆಯನ್ನ ಮಾಡುವವರು ಮತ್ತು ಭಜನೆಯನ್ನು ಕಲಿಸುವವರು ಹಾಗೂ ಭಜನೆಯಲ್ಲಿ ಕಲಿತವರು ಇಂದು ನಾಡಿನ ತುಂಬಾ ತಮ್ಮ ಹೆಸರನ್ನು ಮಾಡಿದ್ದಾರೆ ಎಂದರು.
ಪುರಾಣ ಪ್ರವಚನ ಕಾರ್ಯದ ಬಸಯ್ಯ ಶಾಸ್ತ್ರಿಗಳು ಕುಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿವಾನಂದ ಸಾಹು ಮಾಕಾ, ಎಸ್. ಎಸ್. ಸಲಗರ್, ವೀರಭದ್ರಯ್ಯಸ್ವಾಮಿ ಹಿರೇಮಠ, ಶರಣು ಮಣುರ, ರಮೇಶ್ ಕೊಳಕುರ, ಮಹೇಶ್ ಮಹಾಜನಶೆಟ್ಟಿ ಆಗಮಿಸಿದರು. ಉದ್ಘಾಟನೆ ಅಂಗವಾಗಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರಾದ ಶಿವಾನಂದ ಮಂದೆವಾಲ, ಬಂಡಯ್ಯ ಸ್ವಾಮಿ ಸುಂಟನೂರ, ಸಂಗಮೇಶ ನೀಲ, ಬಲಭೀಮ ನೆಲೋಗಿ, ಸಂಗಮೇಶ ಮಾಶಾಳ, ಶಿವಕುಮಾರ ಕಟ್ಟಿಸಂಗಾವಿ, ವೀರೇಶ ಧಣ್ಣುರ, ಐಶ್ವರ್ಯ ಸ್ಥಾವರ ಮಠ ಇವರಿಂದ ಸಂಗೀತ ಕಾರ್ಯಕ್ರಮ ಜರಗಿತು. ನಂತರ ಗ್ರಾಮದ ರೇವಣಸಿದ್ಧೇಶ್ವರ ಹಾಗೂ ಸಿದ್ದಲಿಂಗೇಶ್ವರ ಭಜನಾ ಸಂಘದವರಿಂದ ಭಜನೆ ಕಾರ್ಯಕ್ರಮ ಜರುಗಿತು. ವಿಶೇಷವಾಗಿ ಗ್ರಾಮದ ಹಿರಿಯ ಭಜನಾ ಸಂಘದ ಕಲಾವಿದರಿಗೆ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಸಂತೋಷ ನಂದರಗಿ ಮಠ ವಂದಿಸಿದರು. ಶಿವಲಿಂಗ ಹಳ್ಳಿ ನಿರೂಪಿಸಿದರು.






























