ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಪಟೇಲ್ ಫೋಟೋ ಆಂಡ್ ಆರ್ಟ್ ವಕ್ರ್ಸ ಭಂಕೂರ ಅವರ ಸಂಯುಕ್ತಾಶ್ರಯದಲ್ಲಿಂದು ನಗರದ ಕನ್ನಡಭವನದಲ್ಲಿ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಛಾಯಾಚಿತ್ರಗಳ ಪ್ರದರ್ಶನ ಮತ್ತು ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ. ಫಾರೂಕ್ ಮಣೂರ ಅವರು ಉದ್ಘಾಟಿಸಿದರು.ವಿಜಯಕುಮಾರ ಪಾಟೀಲ ತೇಗಲತಿಪ್ಪಿ,ವಾಸುದೇವ ಚವ್ಹಾಣ,ಖಾಜಾ ಪಟೇಲ್ ಕಲ್ಲಬೇನೂರ,ಶಿವರಾಜ ಅಂಡಗಿ ,ಎಂ.ಸಂಜೀವ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.