
ಕಲಬುರಗಿ,ಆ.9-ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ಸಹಯೋಗದಲ್ಲಿ ನಾಡೋಜ ಡಾ.ಶಾಂತರಸ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕದ ಪ್ರದರ್ಶನವು ರಂಗಾಯಣದ ರೆಪರ್ಟರಿ ಕಲಾವಿದರಿಂದ ಇದೇ ಆಗಸ್ಟ್ 10 ಮತ್ತು 11 ರಂದು ಸಾಯಂಕಾಲ 6 ಗಂಟೆಗೆ ಡಾ. ಎಸ್.ಎಮ್. ಪಂಡಿತ ರಂಗಮಂದಿರದಲ್ಲಿ ಪ್ರದರ್ಶಿಸಲಾಗುವುದು ಎಂದು ಕಲಬುರಗಿ ರಂಗಾಯಣದ ನಿರ್ದೇಶಕರಾದ ಡಾ. ಸುಜಾತ ಜಂಗಮಶೆಟ್ಟಿ ಅವರು ತಿಳಿಸಿದರು.
ನಗರದ ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾಹಿತಿ ಆಯೋಗದ ಅಧ್ಯಕ್ಷರಾದ ಬಿ.ವೆಂಕಟ ಸಿಂಗ್ ಅವರು ನಾಟಕ ಪ್ರದರ್ಶನ ಉದ್ಘಾಟಿಸುವರು. ಡಾ. ಸುಜಾತಾ ಜಂಗಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಬಾಗಲಕೋಟೆ ರಂಗಸಮಾಜದ ಸದಸ್ಯರಾದ ಮಹಾಂತೇಶ ಎಂ.ಗಜೇಂದ್ರಗಡ, ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಣ್ಣಗೌಡಸಾನಿ ನಾಟಕದ ರಂಗಗೀತೆಗಳು ಮತ್ತು ಶಾಂತರಸರ ಗಜಲ್‍ಗಳ ಗಾಯನವನ್ನು ಧಾರವಾಡದ ರಾಘವ ಕಮ್ಮಾರ ಮತ್ತು ತಂಡ, ರಂಗಸಜ್ಜಿಗೆ ಹಾಗೂ ರಂಗ ಪರಿಕರ ರಾಜಕುಮಾರ್ ಎಸ್. ಕೆ, ಬೆಳಕು, ಸಹ ನಿರ್ದೇಶನ ಶ್ರೀನಿವಾಸ ದೋರನಹಳ್ಳಿ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಣ್ಣಗೌಡಸಾನಿ ನಾಟಕದ ರಂಗಪಠ್ಯ ವಸ್ತು ವಿನ್ಯಾಸ ಹಾಗೂ ನಿರ್ದೇಶಕ ಪ್ರವೀಣ ರೆಡ್ಡಿ ಗುಂಜನಹಳ್ಳಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ “ಸಣ್ಣಗೌಡಸಾನಿ” ನಾಟಕದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ಆಡಳಿತ ಅಧಿಕಾರಿ ಸಿದ್ಧರಾಮ್ ಶಿಂಧೆ, ಮಹಾಂತೇಶ ನವಲಕಲ್, ಪ್ರವೀಣರೆಡ್ಡಿ ಗುಂಜನಹಳ್ಳಿ, ರಾಘವ ಕಮ್ಮಾರ, ಅಮರನಾಥ ಇರ್ಕಲ್, ಕಲಬುರಗಿ ರಂಗಾಯಣದ ಸಿಬ್ಬಂದಿ ಮತ್ತು ಕಲಾವಿದರಿದ್ದರು.































