Home ಜಿಲ್ಲೆ ಸಂಡೂರು ತಾ ಚಿಕ್ಕಂತಾಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ

ಸಂಡೂರು ತಾ ಚಿಕ್ಕಂತಾಪುರ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.09: ಜಿಲ್ಲೆಯ ಸಂಡೂರು ತಾಲ್ಲೂಕು ತೋರಣಗಲ್ಲು ಹೋಬಳಿಯ ಚಿಕ್ಕಂತಾಪುರ ಗ್ರಾಮದ ಭೂಮಿಯ ಸರ್ವೆ ನಂ:-53/” ವಿಸ್ತೀರ್ಣ 1.28ಎಕರೆ ಸರ್ಕಾರಿ ಜಮೀನನ್ನು ಪದ್ಧವತಿ ಫೆರೋಸ್ ಲಿಮಿಟೆಡ್ ಎಟ (ಸ್ಟೀಲ್) ಲಿಮಿಟೆಡ್ ಕಂಪನಿಯವರು ಇದ್ದಲ್ಲು (ಕೊಕ್) ಸುಮಾರು 50ಅಡಿ ಎತ್ತರ ರಾಶಿಯನ್ನು ಹಾಕಿರುತ್ತಾರೆ. ಸದರಿ ಭೂಮಿಯಲ್ಲಿ ಮಾನ್ಯ ತಹಶೀಲ್ದಾರ್ ಸಂಡೂರು ಇವರು ಅತಿಕ್ರಮಣ ಮಾಡಬಾರದೆಂದು ನಾಮಫಲಕ ಹಾಕಿದರು. ಸಹ ಲೆಕ್ಕಸದೆ ಸದರಿ ಭೂಮಿಯಲ್ಲಿ ಅತಿಕ್ರಮಣ ಮಾಡಿ ಇದ್ದಲ್ಲು (ಕೊಕ್) ಹಾಕಿಕೊಂಡಿರುತ್ತಾರೆ. ಸದರಿ ಪದ್ಮವತಿ ಫೆರೋಸ್ ಲಿಮಿಟೆಡ್ ಎಟ (ಸ್ಟೀಲ್) ಲಿಮಿಟೆಡ್ ಕಂಪನಿಯವರ ಕಾನೂನು ಕ್ರಮ ಜರುಗಿಸಬೇಕೆಂದು ಕರವೇ ಕಾವಲುಪಡೆ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸದರಿ ಭೂಮಿಯಲ್ಲಿ ಇದ್ದಲ್ಲು (ಕೊಕ್) ರಾಶಿ ರಾಶಿಗಳು ಹಾಕಿ ದಂಧೆ ಮಾಡುತ್ತಿದ್ದಾರೆ. ಸದರಿ ಕಂಪನಿಗೆ ತಿಂಗಳಿಗೆ ರೂ:-25,000/- ಪ್ರಕಾರ ಸರ್ಕಾರಕ್ಕೆ ರಾಯಲಿಟಿ ಕೊಡಬೇಕಾಗುತ್ತದೆ ಎಕ್ಕಂದೆ ಸುಮಾರು ಸದರಿ ಕಂಪನಿಯವರು 20ವರ್ಷಗಳಿಂದ ವಾಣಿಜ್ಯ ಧಂದೆ ಮಾಡಿ ಸಾಕಷ್ಟು ಲಾಭಪಡೆದಿರುತ್ತಾರೆ. ವರ್ಷಕ್ಕೆ 3ಲಕ್ಷ ರೂಪಾಯಿಗಳ ಪ್ರಕಾರ 20ವರ್ಷಗಳಿಗೆ 60ಲಕ್ಷ ರೂಪಾಯಿಗಳು ಸದರಿ ಕಂಪನಿಯವರ ಕಡೆಯಿಂದ ರಾಯಲಿಟಿ ವಸೂಲಿ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳತ್ತೇವೆ. ಸದರಿ ರಾಯಲಿಟಿ ಹಣ ವಸೂಲಿ ಮಾಡಿದರೆ ಸರ್ಕಾರಕ್ಕೆ ಆದಾಯ ಬರುತ್ತದೆ. ಇನ್ನೊಮ್ಮೆ ಯಾರು ಸಹ ಸರ್ಕಾರ ಭೂಮಿಯಲ್ಲಿ ಅತಿಕ್ರಮಣ ಮಾಡುವುದಿಲ್ಲ. ಸದರಿ ಭೂಮಿಯಲ್ಲಿ ಅತಿಕ್ರಮಣ ಮಾಡಿದ ಬಗ್ಗೆ ಕಂದಾಯ ಅಧಿಕಾರಿಗಳು ಮಾನ್ಯ ತಹಶೀಲ್ದಾರ್ರಿಗೆ ವರದಿ ನೀಡಿರುತ್ತಾರೆ. ಸದರಿ ವರದಿ ಆಧಾರದ ಮೇಲೆ ತಹಶೀಲ್ದಾರ್ ಇವರು 01/07/2026 ದಂದು ಸದರಿ ಭೂಮಿಯನ್ನು ತೆರವುಗೊಳಿಸಲು ಒತ್ತುವರಿ ಮಾಡಿಕೊಂಡ ಕಂಪನಿಯವರಿಗೆ ನೋಟೀಸ್ ನೀಡಿರುತ್ತಾರೆ. ಕಂದಾಯ ಭೂ ಕಾಯ್ದೆ 1964 ಕಲಂ 192ಎ-192ಬಿ ರಂತೆ ಕ್ರಮ ಜರಗಿಸಲು ಕೋರುತೇವೆ, ಮತ್ತು ಸದರಿ ಕಂಪನಿಯವರು 20ವರ್ಷ ಭೂಮಿಯಲ್ಲಿ ಅತಿಕ್ರಮಣ ಮಾಡಿ ವ್ಯಾಪಾರದಲ್ಲಿ ಲಾಭಗಳಿಸಿದ್ದು ಸರ್ಕಾರಕ್ಕೆ ವರ್ಷಕ್ಕೆ 03ಲಕ್ಷ ರೂಪಾಯಿಗಳು ಪ್ರಕಾರ 20ವರ್ಷಗಳ ರಾಯಲಿಟಿ ಸದರಿ ಕಂಪನಿಯಿಂದ ಭೂ ಕಂದಾಯ ಬಾಕಿಯೆಂದು ಪರಿಗಣಿಸಿ ವಸೂಲಿ ಮಾಡಿ ಸದರಿ ಭೂಮಿಯನ್ನು ತೆರೆವುಗೊಳಿಸಿ ಸದರಿ ಕಂಪನಿಯವರ ವಿರುದ್ಧ ಅತಿಕ್ರಮಣ ಮಾಡಿದಕ್ಕೆ ಕಿಮಿನಲ್ ಕೇಸು ದಾಖಲೆ ಮಾಡಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಕಾವಲುಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಹೆಚ್.ಸುರೇಶ್ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಸ್.ಎನ್.ನರಸಿಂಹ ರಾಜು ಜಿಲ್ಲಾ ಉಪಾಧ್ಯಕ್ಷ ಮೋಹನ್ ಭೋಗ್ ಯುವ ಘಟಕ ಜಿಲ್ಲಾಧ್ಯಕ್ಷ ವಿ.ಎಸ್.ಸಾಗರ್ ಅಪ್ಪು ತಾಲೂಕು ಉಪಾಧ್ಯಕ್ಷ ಮೊಹಮ್ಮದ್ ಮುಬಾರಕ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಸದಸ್ಯರಾದ ಸಾರಥಿ ಉಪಸ್ಥಿತಿಯಲ್ಲಿದ್ದರು