Home ಜಿಲ್ಲೆ ಆ.15 ರೋಳಗೆ ನೀರು ಬಿಡದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ರಾಮಲಿಂಗಪ್ಪ

ಆ.15 ರೋಳಗೆ ನೀರು ಬಿಡದಿದ್ದರೆ ಬಿಜೆಪಿಯಿಂದ ಉಗ್ರ ಹೋರಾಟ: ರಾಮಲಿಂಗಪ್ಪ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.09: ತುಂಗಭದ್ರ ಜಲಾಶಯದಿಂದ ಎಡ ಹಾಗು ಬಲದಂಡೆಯ ಕಾಲವೆಗಳಿಗೆ ಕೃಷಿಗಾಗಿ ನೀರು ಬಿಡದೇ ಇದ್ದರೆ ಭಾರತೀಯ ಜನತಾ ಪಾರ್ಟಿಯಿಂದ ಉಗ್ರ ಹೋರಾಟ ನಡೆಸಲಿದೆಂದು ಪಕ್ಷದ ಮುಖಂಡ ಕೆ.ಎ.ರಾಮಲಿಂಗಪ್ಪ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.ಜಲಾಶಯದಲ್ಲಿ ಈಗಾಗಲೇ 74 ಟಿಎಂಸಿ ನೀರು ಸಂಗ್ರಗವಾಗಿದ್ದರೂ. ಇನ್ನೂ ಸರ್ಕಾರ, ತುಂಗಭದ್ರ ಮಂಡಳಿ ಕಾಲಯವೆಗಳಿಗೆ ಕೃಷಿಗೆ ನೀರು ಬಿಡುತ್ತಿಲ್ಲ. ಈಗಾಗಲೇ ಒಂದು ತಿಂಗಳು ನಾಟಿಮಾಡುವುದು ಬಿಳಂಬವಾಗಿದೆ. ತಡವಾದಷ್ಟು ಇಳಯವರಿ ಕಡಿಮೆ ಆಗಲಿದೆ. ರೈತರು ಈಗಗಾಲೇ ಭತ್ತ, ಮೆಣಸಿನ ಸಸಿ ಹಾಕಿ ತಿಂಗಳು ಕಳೆದಿದೆ. ಕೂಡಲೇ ನೀರು ಬಿಡಬೇಕಿತ್ತು.

ಆದರೂ ಜನಪ್ರತಿನಿಧಿಗಳು ಮೀನಾ ಮೇಷ ಎಣಿಸುತ್ತ. ಈ ತಿಂಗಳ 11 ಕ್ಕೆ 80 ಟಿಎಮ್ ಸಿ ನೀರು ಸಂಗ್ರಹವಾದರೆ ನೀರು ಬಿಡುವ ಬಗ್ಗೆ ಚರ್ಚಿಸಲು ತುಂಗಭದ್ರ ನಿರಾವರಿ ಸಲಹಾ ಸಮಿತಿ ಸಭೆ ಕರೆದಿದೆ.

ಈ ಹಿಂದೆ ಬಿಜೆಪಿ ಸರ್ಕಾರ ಜಲಾಶಯದಲ್ಲಿ 26 ಟಿಎಂಸಿ ನೀರು ಸಂಗ್ರಹವಾದಾಗಲೇ ಕಾಲುವೆಗೆ ನೀರು ಬಿಡಲಾಗಿದೆ. ಹೀಗಿರುವಾಗ ಈಗ 70 ಕ್ಕೂ ಹೆಚ್ಚು ಟಿಎಂ ಸಿ ನೀರು ಇರುವಾಗ ನೀರು ಬಿಡಲು ಈ ಸರ್ಕಾರ ವಿಳಂಬ ಮಾಡುವುದು ಸರಿಯಲ್ಲ ಎಂದು ರಾಮಲಿಂಗಪ್ಪ ಹೇಳಿದ್ದಾರೆ.