
ಕಲಬುರಗಿ: ನಗರದ ಹಜರತ್ ಸೈಯದ್ ರುಕಮುದ್ದಿನ ತೋಲಾ ದರ್ಗಾ ಹತ್ತಿರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ನಿರ್ಮಿಸಲಾಗುತ್ತಿರುವ ಶಾದಿಮಹಲ್ ನಿರ್ಮಾಣ ಕಾಮಗಾರಿಗೆ ಇಂದು ಅಡಿಗಲ್ಲು ಸಮಾರಂಭ ಜರುಗಿತು. ದರ್ಗಾದ ಸಜ್ಜಾದ ನಶೀನ ಅನ್ವರ ಹುಸೇನ್,ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಇಲಿಯಾಸ್ ಬಾಗವಾನ್ ,ಸಂತೋಷ ಪಾಟೀಲ ದಣ್ಣೂರ,ಝೋನಲ್ ಇಂಜನೀಯರ್ ( ಎಇಇ) ನಾಗಶನ್ ಡಾಂಗೆ,ಲಿಂಗರಾಜ ಕಣ್ಣಿ,ಅಲಿಮ್ ಪಟೇಲ್,ಶೇಖ ಖಾಜಾ ಹುಸೇನ್ ಅತನೂರ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.































