Home ಜಿಲ್ಲೆ ಕಲಬುರಗಿ ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯರಾಗಿ ಸಮತಾ ಹೊಸಪೇಟಿ

ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯರಾಗಿ ಸಮತಾ ಹೊಸಪೇಟಿ

ಕಲಬುರಗಿ,ಜು 28: ರಾಜ್ಯದ ಏಕೈಕ ಮಹಿಳಾ ವಿವಿಯಾಗಿರುವ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಸಿಂಡಿಕೇಟ್ ಸದಸ್ಯರಾಗಿ ಸಮತಾ ಹನುಮಂತರಾಯ ಹೊಸಪೇಟಿ ಅವರು ನಾಮನಿರ್ದೇಶನಗೊಂಡಿದ್ದಾರೆ.
ಸಮತಾ ಅವರನ್ನು ಮೂರು ವರ್ಷಗಳ ಅವಧಿಗೆ ವಿವಿ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮಹಿಳಾ ವಿವಿ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಸಮತಾ ಅವರನ್ನು ವಿವಿ ಕುಲಪತಿ ಕುಲಪತಿ ಪೆÇ್ರ. ವಿಜಯಾ ಬಿ. ಕೋರಿಶೆಟ್ಟಿ ಅವರು ಸ್ವಾಗತಿಸಿಕೊಂಡರು.
ಇದೇ ಸಂದರ್ಭದಲ್ಲಿ ಸಮತಾ ಹೊಸಪೇಟಿ ಅವರು ಕುಲಪತಿ ಪೆÇ್ರ. ವಿಜಯಾ ಅವರೊಂದಿಗೆ ವಿವಿ ಶೈಕ್ಷಣಿಕ ಚಟುವಟಿಕೆಗಳ ಕುರಿತಾಗಿ ಸಮಾಲೋಚಿಸಿದರು. ಸಾಹಿತ್ಯವಾಗಿ ಗುರುತಿಸಿಕೊಂಡಿರುವ ಸಮತಾ ಅವರು ಸಾಹಿತ್ಯ ಜತೆಗೆ ಸಾಮಾಜಿಕ ಹಲವಾರು ಕಾರ್ಯಗಳನ್ನು ಕೈಗೊಂಡಿರುವುದು ಗುರುತಿಸುವಂತಿದೆ. ಇದು ವಿವಿ ಶೈಕ್ಷಣಿಕ ಬೆಳವಣಿಗೆ ಪೂರಕವಾಗಲಿದೆ ಎಂದು ಕುಲಪತಿಗಳು ಇದೇ ಸಂದರ್ಭದಲ್ಲಿ ಹೇಳಿದರು. ವಿವಿಯ ಅಧಿಕಾರಿಗಳೂ ಈ ಸಂದರ್ಭದಲ್ಲಿ ಹಾಜರಿದ್ದರು.