Home ಜಿಲ್ಲೆ ಕಲಬುರಗಿ ಭಾರತೀಯ ಶ್ರೇಷ್ಟ ಪರಿಸರವಾದಿ ಸಾಲುಮರದ ತಿಮ್ಮಕ್ಕ

ಭಾರತೀಯ ಶ್ರೇಷ್ಟ ಪರಿಸರವಾದಿ ಸಾಲುಮರದ ತಿಮ್ಮಕ್ಕ

ಕಲಬುರಗಿ :ಜು.2: ಸಾಲುಮರದ ತಿಮ್ಮಕ್ಕನವರು ನಮ್ಮ ಕನ್ನಡ ನೆಲದ ಅಪರೂಪದ, ಮಾದರಿಯ ಸಾಧಕಿಯಾಗಿದ್ದಾರೆ. ಅವರೊಬ್ಬ ಭಾರತೀಯ ಶ್ರೇಷ್ಟ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ತಮ್ಮ ಮಕ್ಕಳಂತೆ ಭಾವಿಸಿ ಬೆಳೆಸಿದವರು. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀμï ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸಾಲು ಮರದ ತಿಮ್ಮಕ್ಕನವರ 115ನೇ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ತಿಮ್ಮಕ್ಕನವರಲ್ಲಿರುವ ಪರಿಸರದ ಕಾಳಜಿ ನಮ್ಮೆಲ್ಲರಿಗೆ ಮಾದರಿಯಾಗಿದೆ. ನಾವೆಲ್ಲರು ಗಿಡ-ಮರಗಳನ್ನು ಬೆಳೆಸಿ, ಪರಿಸರವನ್ನು ಕಾಪಾಡುವ ಮೂಲಕ ತಿಮ್ಮಕ್ಕನವರ ತತ್ವವನ್ನು ಆಚರಿಸೋಣ. ಈ ನಿಟ್ಟಿನಲ್ಲಿ ನಮ್ಮ ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 9 ವರ್ಷಗಳಲ್ಲಿ 2000ಕ್ಕೂ ಅಧಿಕ ಸಸಿಗಳನ್ನು ನೆಡುವುದು ಮತ್ತು ವಿತರಣೆಯ ಕಾರ್ಯ ಮಾಡುವ ಮೂಲಕ ವೃಕ್ಷಮಾತೆ ತಿಮ್ಮಕ್ಕನವರ ತತ್ವವನ್ನು ಅಳವಡಿಸಿಕೊಂಡಿದೆ. ಮಾತೆಯವರು ಕಳೆದ ಕೆಲವು ತಿಂಗಳಿನ ಹಿಂದೆ ನಿಧನರಾಗುವ ಮೂಲಕ ನಾಡು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದತ್ತು ಹಡಪದ, ಶಿವಯೋಗೆಪ್ಪಾ ಎಸ್.ಬಿರಾದಾರ, ದಿನೇಶ್ ಮಿಶ್ರಾ, ಅಮರ ಬಂಗರಗಿ ಹಾಗೂ ವಿದ್ಯಾರ್ಥಿಗಳಿದ್ದರು.