
ಕೆ.ಆರ್.ಪುರ, ಸೆ.೧೫ – ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ರೂ. ೧.೫೦ ಕೋಟಿ ಷೇರು ಬಂಡವಾಳದೊಂದಿಗೆ ರೂ. ೨೬ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ. ಹರೀಶ್ ಬಾಬು ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಾಡುಬಿಸನ ಹಳ್ಳಿಯಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಎಂಟು ವರ್ಷಗಳ ನಿರಂತರ ಪ್ರಗತಿಯೊಂದಿಗೆ ಸಂಘವು ಸದಸ್ಯರ ಆರ್ಥಿಕ ಹಿತಾಸಕ್ತಿಗೆ ಆದ್ಯತೆ ನೀಡುತ್ತಾ ಬಂದಿದೆ ಎಂದರು.
ಸದಸ್ಯರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಘಕ್ಕೆ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಾಣ, ಸದಸ್ಯರಿಗೆ ವಾಹನ ಸಾಲ ಸೌಲಭ್ಯ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಗೌರವಾಧ್ಯಕ್ಷ ಹೊರಮಾವು ರಾಮಚಂದ್ರ, ಸಲಹೆಗಾರ ಅಶ್ವಥಯ್ಯ, ಉಪಾಧ್ಯಕ್ಷ ವೈ. ಜಗನಾಥ್ ಹಾಗೂ ಸಂಘದ ನಿರ್ದೇಶಕರಾದ ಟಿ ಚಂದ್ರಪ್ಪ, ಎಸ್ ಗೋಪಾಲಯ್ಯ, ಕೃಷ್ಣಮೂರ್ತಿ, ಎಂ ನಾಗರಾಜು,ಪಿ.ಎಂ. ಸೋಮಶೇಖರ್, ಧನಪಾಲನ್, ವಸಂತಾ ಮುನಿರಾಜ್ ಉಪಸ್ಥಿತರಿದ್ದರು.































